2022ರ ಏಷ್ಯಾ ಕಪ್ ಟೂರ್ನಿ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, ಭಾರತ -ಪಾಕಿಸ್ತಾನ ಮುಖಾಮುಖಿಗೆ ಡೇಟ್ ಫಿಕ್ಸ್ ಆಗಿದೆ.
ಆಗಸ್ಟ್ 27 ರಿಂದ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಆರಂಭವಾಗಲಿದೆ. ಆಗಸ್ಟ್ 28 ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಟಿ20 ಕ್ರಿಕೆಟ್ ಮಾದರಿಯಲ್ಲಿ ಯುಎಇ ನಲ್ಲಿ ಏಷ್ಯಾ ಕಪ್ ಟೂರ್ನಿ ನಡೆಯಲಿದೆ.
ಭಾರತ -ಪಾಕ್ ತಂಡಗಳು ಆಗಸ್ಟ್ 28 ರಂದು ಏಷ್ಯಾ ಕಪ್ ನಲ್ಲಿ ಮತ್ತು ಮತ್ತು ಅಕ್ಟೋಬರ್ 23 ರಂದು ವಿಶ್ವ T20 ಟೂರ್ನಿಯಲ್ಲಿ ಮುಖಾಮುಖಿಯಾಗಲಿವೆ.
ಆಗಸ್ಟ್ 27 ರಿಂದ ಪ್ರಾರಂಭವಾಗುವ ಪುರುಷರ ಏಷ್ಯಾ ಕಪ್‌ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಪರಸ್ಪರ ಸೆಣಸಾಡಲಿವೆ. ಆಗಸ್ಟ್ 28 ರಂದು ದುಬೈನಲ್ಲಿ ನಡೆಯುವ ಎ ಗುಂಪಿನ ಆರಂಭಿಕ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ.
ಪಂದ್ಯಾವಳಿಯಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಪರಸ್ಪರ ಎದುರಾಗಲು ಅವಕಾಶವಿದೆ. ಗುಂಪು ಹಂತದ ನಂತರ ಸೂಪರ್ 4 ಹಂತದಲ್ಲಿ ಮತ್ತು ಏಷ್ಯಾ ಕಪ್ ಫೈನಲ್ ನಲ್ಲಿಯೂ ಆಡಬಹುದು.
ಐಸಿಸಿ ಪುರುಷರ T20 ವಿಶ್ವಕಪ್‌ನಲ್ಲಿ ಅಕ್ಟೋಬರ್ 23 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಮತ್ತೆ ಭಾರತ –ಪಾಕ್ ಮುಖಾಮುಖಿಯಾಗಲಿವೆ.
ದುಬೈನಲ್ಲಿ 2021 ರಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್‌ನಲ್ಲಿ 10 ವಿಕೆಟ್ ಗಳ ಸೋಲಿನ ನಂತರ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಈಗ ಪಾಕ್ ಬಗ್ಗುಬಡಿಯಲು ಸಜ್ಜಾಗಿದೆ.