
ದೇಶದಲ್ಲಿ ಭಾರೀ ಹೆಸರು ಹಾಗೂ ದುಡ್ಡು ಮಾಡಬಲ್ಲ ಕ್ಷೇತ್ರಗಳಾದ ಬಾಲಿವುಡ್ ಹಾಗೂ ಕ್ರಿಕೆಟ್ ನಡುವಿನ ಜುಗಲ್‌ಬಂದಿ ಇಂದು ನೆನ್ನೆಯದಲ್ಲ. ಬಾಲಿವುಡ್ ನಟಿಯರು ಕ್ರಿಕೆಟಿಗರೊಂದಿಗೆ ರೊಮ್ಯಾನ್ಸ್ ಮಾಡುವುದು ಹೊಸ ವಿಚಾರವೇನಲ್ಲ.
ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಪ್ರೇಮ ಪ್ರಸಂಗ ಇವುಗಳಲ್ಲಿ ಇತ್ತೀಚಿನದು. ಇದೀಗ ಈ ಪವರ್ ಕಪಲ್ ಬಳಿಕ ಮತ್ತೊಂದು ಕ್ರಿಕೆಟ್-ಬಾಲಿವುಡ್ ಜೋಡಿ ನಿಧಾನವಾಗಿ ಎಲ್ಲೆಡೆ ಸದ್ದು ಮಾಡುತ್ತಿದೆ.
ಕೆ.ಎಲ್. ರಾಹುಲ್ ಹಾಗೂ ಆತಿಯಾ ಶೆಟ್ಟಿ ಕೆಲ ದಿನಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಇವರಿಬ್ಬರ ರಿಲೇಶನ್‌ಶಿಪ್ ಸೀರಿಯಸ್ಸಾಗಿಯೇ ಇದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಇಬ್ಬರ ಚಿತ್ರಗಳು ಪೋಸ್ಟ್ ಆಗುತ್ತಿರುತ್ತವೆ.
ರಾಹುಲ್ ಜೊತೆಗೆ ತಮ್ಮ ಚಿತ್ರವೊಂದನ್ನು ಹಾಕಲು ಅಭಿಮಾನಿಯೊಬ್ಬರು ಕೇಳಿದಾಗ ಸ್ಪಂದಿಸಿದ ಆತಿಯಾ, ತಾವು ಹಾಗೂ ರಾಹುಲ್ ಇಬ್ಬರೂ ಮಾಸ್ಕ್ ಹಾಕಿಕೊಂಡು ತೆಗೆದುಕೊಂಡಿರುವ ಸೆಲ್ಫಿ ಒಂದನ್ನು ಪೋಸ್ಟ್ ಮಾಡಿದ್ದಾರೆ. ಇಬ್ಬರ ಪ್ರಣಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಾತುಗಳು ನಡೆಯುತ್ತಿವೆ.
