ಕೊರೋನಾ ಕಾಟದಿಂದಾಗಿ ಎಲ್ಲ ಚಟುವಟಿಕೆಗಳು ಬಂದ್ ಆಗಿದ್ದು, ಈಜುಕೊಳಗಳು ಇಲ್ಲದೇ ಇರುವುದರಿಂದ ಈಜುಪಟುಗಳಿಗೆ ಅಭ್ಯಾಸ ತಪ್ಪಿದಂತಾಗಿದೆ.
ಅರ್ಜೆಂಟೈನಾದ ಪ್ಯಾರಾಲಂಪಿಕ್ ಈಜುಪಟು ಸೆಬಾಸ್ಟಿಯನ್ ಗಲ್ಲೆಗ್ಯುಲ್ಲೊಗೂ ಇದೇ ಸಮಸ್ಯೆ ಎದುರಾಗಿದೆ. ಕಳೆದ ನಾಲ್ಕೈದು ತಿಂಗಳಿಂದ ಅಭ್ಯಾಸ ಮಾಡಲ ಈಜುಕೊಳ ಇಲ್ಲದಂತಾಗಿದೆ.
ಇದನ್ನು ಕಂಡ ಸೆಬಾಸ್ಟಿಯನ್ ತಂದೆ, ಸ್ವತಃ ಇಟ್ಟಿಗೆ ಕೆಲಸ ಮಾಡುವರಾದ್ದರಿಂದ ತಮ್ಮ ಮನೆಯ ಹಿಂದಿನ ಜಾಗದಲ್ಲೇ ಈಜುಕೊಳವನ್ನು ಸೃಷ್ಟಿಸಿಕೊಟ್ಟಿದ್ದಾರೆ.
ತಂದೆ ಎಡ್ಮುಂಡೆ ಹೆರ್ನಾಂಡೆಸ್ ಹೇಳುವ ಪ್ರಕಾರ, ಮೊದಲ ದಿನ ಮನೆಯ ಹಿಂದಿರುವ ಎರಡೂ ಬದಿಗಳಿಗೆ ಮನೆಯಲ್ಲೇ ಇದ್ದ ಮರದ ದಿಮ್ಮಿ ಇಟ್ಟು, ನೀರು ಹರಿದು ಹೋಗದಂತೆ ತಡೆಯಲು ಮರದ ದಿಮ್ಮಿಗಳನ್ನ ಪ್ಲಾಸ್ಟಿಕ್ ಶೀಟ್ ಮೂಲಕ ಮುಚ್ಚಲಾಯಿತು. ನೆಲಕ್ಕೂ 15 ಮೀಟರ್ ಉದ್ದ ಮತ್ತು 4 ಮೀಟರ್ ಅಗಲದ ಪ್ಲಾಸ್ಟಿಕ್ ಹಾಸಲಾಗಿದೆ.
ಈ ವ್ಯವಸ್ಥೆ ಒಂದು ಚೀಲದ ಮಾದರಿಯಲ್ಲಿ ನಿರ್ಮಾಣ ಮಾಡಿದ್ದು, ನೀರು ನಿಲ್ಲಲಿದೆ. ಈಜುಕೊಳದಂತೆ ಇರುವುದರಿಂದ ಅಭ್ಯಾಸಕ್ಕೆ ಯಾವ ತೊಂದರೆಯೂ ಇಲ್ಲ ಎನ್ನುತ್ತಾರೆ.