
ಅಂದ ಹಾಗೆ ಆನಂದ್ ಮಹೀಂದ್ರಾ ಈ ಉಡುಗೊರೆಯನ್ನ ಕಂಪನಿ ಹಣದಿಂದ ನೀಡುತ್ತಿಲ್ಲ. ಬದಲಾಗಿ ತಮ್ಮ ಸ್ವಂತ ಹಣದಿಂದ ಈ ಉಡುಗೊರೆಗಳನ್ನ ಆಟಗಾರರಿಗೆ ನೀಡುತ್ತಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯನ್ನ 2-1 ಅಂತರದಲ್ಲಿ ಗೆಲ್ಲುವ ಮೂಲಕ ಆಸ್ಟ್ರೇಲಿಯಾವನ್ನ ಬಗ್ಗು ಬಡಿದಿದೆ. ಮಾತ್ರವಲ್ಲದೇ ಕಳೆದ 32 ವರ್ಷಗಳಿಂದ ಗಬ್ಬಾ ಕ್ರೀಡಾಂಗಣದಲ್ಲಿ ಕೇವಲ ಗೆಲುವಿನ ರುಚಿಯನ್ನಷ್ಟೇ ಕಾಣುತ್ತಾ ಬಂದಿದ್ದ ಆಸ್ಟ್ರೇಲಿಯಾ ತಂಡವನ್ನೇ ಸೋಲಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.