
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಎಷ್ಟು ಡೌನ್ ಟು ಅರ್ಥ್ ಗೊತ್ತೆ….?
ಸಾಕಷ್ಟು ಐಷಾರಾಮಿ ಕಾರು, ಬೈಕ್ ಹೊಂದಿರುವ ಮಾಹಿ, ಜಾರ್ಖಂಡ್ ನ ರಾಂಚಿಯಲ್ಲಿರುವ ಫಾರ್ಮ್ ಹೌಸ್ ನಲ್ಲಿ ಲಾಕ್ ಡೌನ್ ಅವಧಿಯ ಕಾಲ ಕಳೆಯುತ್ತಿದ್ದಾರೆ. ತವರು ನೆಲದಲ್ಲಿ ಕೃಷಿಯ ಖುಷಿ ಅನುಭವಿಸುತ್ತಿದ್ದಾರೆ.
ಅಷ್ಟೇ ಅಲ್ಲ, ಎಷ್ಟೇ ಐಷಾರಾಮಿ ವಾಹನ ಮತ್ತಿತರೆ ಸೌಲಭ್ಯಗಳಿದ್ದರೂ ಕೃಷಿಗಾಗಿ ದೇಸೀ ಪರಿಕರಗಳನ್ನು ಖರೀದಿಸಲು ಮುಂದಾಗಿದ್ದಾರೆ. ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಡಿ ತಯಾರಾಗುವ ವಸ್ತುಗಳ ಖರೀದಿಗೆ ಮಹತ್ವ ಕೊಟ್ಟಿದ್ದಾರೆ.
ಮಹೀಂದ್ರಾ ಸಂಸ್ಥೆಯ 8 ಲಕ್ಷ ರೂ. ಬೆಲೆಬಾಳುವ ಸ್ವರಾಜ್ 963 FE ಟ್ರ್ಯಾಕ್ಟರ್ ಖರೀದಿಸಿದ್ದು, ಧೋನಿ ಟ್ರ್ಯಾಕ್ಟರ್ ಚಲಾಯಿಸುವ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಚೆನ್ನೈ ಸೂಪರ್ ಕಿಂಗ್ಸ್ ಟ್ವಿಟ್ಟರ್ ಖಾತೆಯಲ್ಲೂ ಪೋಸ್ಟ್ ಆಗಿದ್ದು, ಮಹೀಂದ್ರ ಸಂಸ್ಥೆ ಅಧ್ಯಕ್ಷ ಆನಂದ್ ಮಹೀಂದ್ರ ಸಹ ಟ್ವೀಟ್ ಮಾಡಿದ್ದಾರೆ. ಉತ್ತಮ ನಿರ್ಣಯ ಮಾಡುವಾತ ಎಂದು ಧೋನಿಯನ್ನು ಕೊಂಡಾಡಿದ್ದಾರೆ. ಒಟ್ಟಾರೆ ಮಾಜಿ ಕೂಲ್ ಕ್ಯಾಪ್ಟನ್ ಎಷ್ಟು ಡೌನ್ ಟು ಅರ್ಥ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿಕೊಂಡಿದ್ದಾರೆ.