ಒಂದು ಕಾಲು ಕಳೆದುಕೊಂಡ ಯುವತಿಯೊಬ್ಬರು ಒಂದೇ ಕಾಲಿನ ಮೇಲೆ ನಿಂತು ಡೆಡ್ ಲಿಫ್ಟಿಂಗ್ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ತಮ್ಮ ಗುರಿ ಸಾಧನೆಯ ಹಾದಿಯಲ್ಲಿ ಬರುವ ಹಲವಾರು ಅಡೆತಡೆಗಳನ್ನು ಮೆಟ್ಟಿ ನಿಲ್ಲಲು ಅನೇಕ ಮಂದಿಗೆ ಈ ವಿಡಿಯೋ ಸ್ಪೂರ್ತಿಯಾಗಿದೆ.
ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಪ್ರಿಯಾಂಕಾ ಶುಕ್ಲಾ ಶೇರ್ ಮಾಡಿಕೊಂಡಿದ್ದು, “ಅಲೆಗಳಿಗೆ ಹೆದರುವ ದೋಣಿ ನೀರನ್ನು ದಾಟಲು ಸಾಧ್ಯವೇ ಇಲ್ಲ. ಪ್ರಯತ್ನ ಮಾಡುವವರು ಎಂದಿಗೂ ಸೋಲುವುದಿಲ್ಲ” ಎಂದು ತಮ್ಮದೇ ಒಂದೆರಡು ಲೈನ್‌ಗಳ ಜೊತೆಗೆ ಪೋಸ್ಟ್ ಮಾಡಿದ್ದಾರೆ.
ಬಸ್ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್: ನಾಳೆಯಿಂದ ಸಾರಿಗೆ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ
ಜನವರಿಯಲ್ಲಿ ಲಾಯ್ ಚಿ-ವಾಯ್ ಹೆಸರಿನ ಮಹಿಳೆಯೊಬ್ಬರು ಗಾಲಿಕುರ್ಚಿ ಬಳಸಿಕೊಂಡು 250 ಮೀಟರ್ ಎತ್ತರದ ಗಗನಚುಂಬಿ ಕಟ್ಟಡವೊಂದನ್ನು ಏರಿದ ಹಾಂಕಾಂಗ್‌ನ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಸ್ಪೈನಲ್ ಕಾರ್ಡ್ ರೋಗಿಗಳ ಶುಶ್ರೂಷೆಗೆಂದು ಹಣ ಸಂಗ್ರಹಿಸಲು ತಾವು ಹೀಗೆ ಮಾಡಿದ್ದಾಗಿ ಲಾಯ್ ಚಿ-ವಾಯ್ ತಿಳಿಸಿದ್ದರು.
ಹತ್ತು ವರ್ಷಗಳ ಹಿಂದೆ ಘಟಿಸಿದ ಕಾರು ಅಫಘಾತದಲ್ಲಿ 37 ವರ್ಷದ ಈ ವ್ಯಕ್ತಿಯ ದೇಹದ ಕೆಳಭಾಗವು ಸ್ವಾಧೀನ ಕಳೆದುಕೊಂಡಿತ್ತು.