ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ವಿರುದ್ಧ ಡೆಲ್ಲಿ 6 ವಿಕೆಟ್ ಜಯ ಗಳಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರುಗಳಲ್ಲಿ 9 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿತು. ಡೆಲ್ಲಿ ಕ್ಯಾಪಿಟಲ್ಸ್ 19.1 ಓವರುಗಳಲ್ಲಿ 4 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿ ಜಯಗಳಿಸಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ವಿರುದ್ಧ ಸತತ 5 ಸೋಲು ಕಂಡಿದ್ದ ಡೆಲ್ಲಿ ತಂಡಕ್ಕೆ low-scoring ಪಂದ್ಯದಲ್ಲಿ 5 ವಿಕೆಟ್ ಜಯ ಸಿಕ್ಕಿದೆ.
ಈ ಪಂದ್ಯದಲ್ಲಿ ಅಮಿತ್ ಮಿಶ್ರಾ 4 ವಿಕೆಟ್ ಪಡೆದು ಗಮನಸೆಳೆದರು. ಮುಂಬೈ ತಂಡದ ರೋಹಿತ್ ಶರ್ಮಾ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಿಶ್ರಾ 7 ಬಾರಿಗೆ ಔಟ್ ಮಾಡುವ ಮೂಲಕ ದಾಖಲೆ ಬರೆದಿದ್ದಾರೆ. ವಿನಯ್ ಕುಮಾರ್ ಮತ್ತು ಸುನಿಲ್ ನರೈನ್ ಅವರು 6 ಸಲ ರೋಹಿತ್ ಶರ್ಮಾ ಅವರನ್ನು ಔಟ್ ಮಾಡಿದ್ದಾರೆ.
ಜಹೀರ್ ಖಾನ್ 7 ಬಾರಿ ಎಂ.ಎಸ್. ಧೋನಿ ಅವರ ವಿಕೆಟ್ ಪಡೆದಿದ್ದು, ಸಂದೀಪ್ ಶರ್ಮಾ 7 ಬಾರಿ ವಿರಾಟ್ ಕೊಹ್ಲಿ ವಿಕೆಟ್ ಪಡೆದಿದ್ದಾರೆ. ಅಮಿತ್ ಮಿಶ್ರಾ ಕೂಡ 7 ಬಾರಿ ರೋಹಿತ್ ಶರ್ಮಾ ವಿಕೆಟ್ ಪಡೆಯುವ ಮೂಲಕ ಐಪಿಎಲ್ ನಲ್ಲಿ 7 ಸಲ ಬ್ಯಾಟ್ಸ್ ಮನ್ ಒಬ್ಬರನ್ನು ಔಟ್ ಮಾಡಿದ ಮೂರನೇ ಬೌಲರ್ ಆಗಿದ್ದಾರೆ.