alex Certify ಆಸೀಸ್‌ ಮಣಿಸಿ ಬಂದ ರಹಾನೆಗೆ ಅಭಿಮಾನಿಗಳಿಂದ ಭಾರೀ ಸ್ವಾಗತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಸೀಸ್‌ ಮಣಿಸಿ ಬಂದ ರಹಾನೆಗೆ ಅಭಿಮಾನಿಗಳಿಂದ ಭಾರೀ ಸ್ವಾಗತ

Ajinkya Rahane Gets Grand Welcome With a Kangaroo Cake After Clinching Border-Gavaskar Trophy

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ತಂಡವನ್ನು ಮುನ್ನಡೆಸಿ ಸರಣಿ ಗೆಲುವಿಗೆ ಕಾರಣರಾದ ಅಜಿಂಕ್ಯಾ ರಹಾನೆ ಸ್ವದೇಶಕ್ಕೆ ಬಂದಿಳಿಯುತ್ತಲೇ ಅವರಿಗೆ ಭವ್ಯ ಸ್ವಾಗತ ನೀಡಲಾಗಿದೆ.

ಕೇಕ್ ಕತ್ತರಿಸುವ ಮೂಲಕ ರಹಾನೆ ತಮಗೆ ಕೊಟ್ಟ ಸ್ವಾಗತವನ್ನು ಸ್ವೀಕರಿಸಿದ್ದಾರೆ. ಕ್ರಿಕೆಟ್ ಪಿಚ್‌ ಆಕೃತಿಯಲ್ಲಿ ತಯಾರಿಸಲಾದ ಕೇಕ್ ಒಂದರ ಮೇಲೆ ಭಾರತದ ಧ್ವಜ ಹಿಡಿದುಕೊಂಡಿರುವ ಕಾಂಗರೂ ಪ್ರತಿಮೆಯನ್ನು ಇಡಲಾಗಿತ್ತು.

ರಹಾನೆಗೆ ಚಾಕಲೇಟ್ ಕೇಕ್ ಬಹಳ ಇಷ್ಟವಾದ ಕಾರಣ ನಾವು ಇಂಥದ್ದೇ ಕೇಕ್ ಮಾಡಿದ್ದೇವೆ ಎಂದು ಅದನ್ನು ತಯಾರಿಸಿದ ಬೇಕರಿ ಮಾಲೀಕ ಅದಿತಿ ಲಿಮಾಯೆ ತಿಳಿಸಿದ್ದಾರೆ.

ಇದೇ ವೇಳೆ ರಹಾನೆಗೆ ಬ್ಯಾಂಡ್ ವಾದ್ಯದೊಂದಿಗೆ ಸ್ವಾಗತ ಕೋರುತ್ತಿರುವ ಅಭಿಮಾನಿಗಳ ವಿಡಿಯೋವೊಂದು ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...