ಕ್ರಿಕೆಟ್ ಮತ್ತು ಖಾದ್ಯಗಳು ಎಂದರೆ ಭಾರತೀಯರಿಗೆ ಅದೆಷ್ಟು ಇಷ್ಟ ಎಂದು ಬಿಡಿಸಿ ಹೇಳಬೇಕಾದ ಅಗತ್ಯವೇ ಇಲ್ಲ ನೋಡಿ. ಭಾರತೀಯರ ಈ ಎರಡು ಫೇವರಿಟ್ ಟಾಪಿಕ್‌ಗಳನ್ನು ಒಂದುಗೂಡಿಸಿದ ಥೀಮ್ ಒಂದರ ಮೇಲೆ ಥಾಲಿಯೊಂದನ್ನು ಪರಿಚಯಿಸಿರುವ ಅಹಮದಾಬಾದ್‌ನ ಮ್ಯಾರಿಯಟ್ ಹೊಟೇಲ್ ಒಂದು ಬೃಹತ್ ಥಾಲಿಯೊಂದನ್ನು ಪರಿಚಯಿಸಿದೆ.
ಈ ದೈತ್ಯ ಥಾಲಿಯನ್ನು ಒಂದು ಗಂಟೆಯೊಳಗೆ ತಿಂದು ಮುಗಿಸಬಲ್ಲಿರಾ ಎಂಬ ಸವಾಲೊಂದನ್ನು ರೆಸ್ಟೋರಂಟ್ ತನ್ನ ಗ್ರಾಹಕರ ಮುಂದೆ ಇಟ್ಟಿದೆ. ಒಬ್ಬರೇ ಆದರೂ ಸರಿ ಅಥವಾ ಸ್ನೇಹಿತರೊಂದಿಗೆ ಸೇರಿಯಾದರೂ ಸರಿ, ಗರಿಷ್ಠ ನಾಲ್ವರು ಮಂದಿ ಸೇರಿಕೊಂಡು ಈ ಥಾಲಿಯನ್ನು ಒಂದು ಗಂಟೆಯೊಳಗೆ ತಿನ್ನಬೇಕಂತೆ.
ಬರೋಬ್ಬರಿ ಐದು ಅಡಿ ಇರುವ ಈ ಥಾಲಿಗೆ ’ಮೊಟೇರಾ ಥಾಲಿ’ ಎಂಬ ಹೆಸರು ಇಡಲಾಗಿದೆ. ಈ ಬೃಹತ್ ಥಾಲಿಯನ್ನು ತಮ್ಮ ಸ್ನೇಹಿತರೊಬ್ಬರೊಂದಿಗೆ ತಿನ್ನಲು ಮುಂದಾಗಿದ್ದ ಕ್ರಿಕೆಟರ್ ಪಾರ್ಥಿವ್ ಪಟೇಲ್ ಸವಾಲನ್ನು ಸ್ವೀಕರಿಸಿದ್ದರು.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ಹೊಸ ದಾಖಲೆಗೆ ಸಜ್ಜು
ಥಾಲಿಯ ಭಾಗವಾಗಿ ಕೊಡುವ ಖಾದ್ಯಗಳಿಗೆ ಕ್ರಿಕೆಟಿಂಗ್ ಟಚ್ ಕೊಟ್ಟಿರುವ ರೆಸ್ಟೋರಂಟ್, ಕೊಹ್ಲಿ ಖಮನ್, ಪಾಂಡ್ಯಾ ಪಾತ್ರಾ, ಧೋನಿ ಕಿಚಡಿ, ಬುಮ್ರಾ ಭಿಂಡಿ, ಭುವನೇಶ್ವರ್ ಭರ್ತಾ, ರೋಹಿತ್ ಆಲೂ ಪರಾಠಾ, ಹರ್ಭಜನ್ ಹಂಡ್ವೋ, ಶಾರ್ದುಲ್ ಶ್ರೀಖಂದ್, ಹ್ಯಾಟ್ರಿಕ್ ಗುಜರಾತಿ ದಾಲ್, ಬೌನ್ಸರ್ ಬಾಸುಂದಿ ಎಂಬ ಹೆಸರಿನಲ್ಲಿ ಭಕ್ಷ್ಯಗಳನ್ನು ಪರಿಚಯಿಸಿದೆ. ಇವುಗಳ ಜೊತೆಯಲ್ಲಿ ಕುರುಕಲು, ಬ್ರೆಡ್, ಅಪೆಟೈಜರ್‌ಗಳು ಹಾಗೂ ಸಿಹಿ ತಿನಿಸುಗಳನ್ನು ಸಹ ಕೊಡಲಾಗುವುದು.
ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ವಿರುದ್ಧ ಇತ್ತೀಚೆಗೆ ಭಾರತ ತಂಡ ಯಶಸ್ಸು ಗಳಿಸಿದ ಸಿರಿಯಲ್ಲಿ ’ಕ್ರಿಕೆಟ್ ರಾಸ್’ ಹಬ್ಬ ಇಟ್ಟುಕೊಂಡಿರುವ ರೆಸ್ಟೋರಂಟ್ ಈ ಥಾಲಿಯನ್ನು ಹೊರತಂದಿದೆ.
https://www.instagram.com/p/CMPb5FKIrEo/?utm_source=ig_web_copy_link