ಸಿಡ್ನಿ: ಅಮೆರಿಕ ಬಳಿಕ ಆಸ್ಟ್ರೇಲಿಯಾದಿಂದಲೂ ಚೀನಾಗೆ ಬಿಗ್ ಶಾಕ್ ನೀಡಲಾಗಿದೆ. 2022ರ ಚಳಿಗಾಲದ ಒಲಂಪಿಕ್ಸ್ ಗೆ ಬಹಿಷ್ಕಾರ ಹಾಕಲಾಗಿದೆ.
ಆಸ್ಟ್ರೇಲಿಯಾದಿಂದ ರಾಜತಾಂತ್ರಿಕ ಬಹಿಷ್ಕಾರ ಹಾಕಲಾಗಿದೆ. ಕ್ರೀಡಾಪಟುಗಳು ಮಾತ್ರ ಚಳಿಗಾಲದ ಒಲಿಂಪಿಕ್ಸ್ ನಲ್ಲಿ ಭಾಗಿಯಾಗಲಿದ್ದಾರೆ. ಅಧಿಕಾರಿಗಳು ಭಾಗಿಯಾಗುವುದಿಲ್ಲ ಎಂದು ಹೇಳುವ ಮೂಲಕ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಬಹಿಷ್ಕಾರದ ಘೋಷಣೆ ಮಾಡಿದ್ದಾರೆ. ಚೀನಾ ರಾಜಧಾನಿ ಬೀಜಿಂಗ್ ನಲ್ಲಿ ಚಳಿಗಾಲದ ಒಲಿಂಪಿಕ್ಸ್ ನಡೆಯಲಿದೆ.
ಚೀನಾದ ಮಾನವ ಹಕ್ಕುಗಳ ದೌರ್ಜನ್ಯದ ಕಾರಣದಿಂದ ತನ್ನ ಸರ್ಕಾರಿ ಅಧಿಕಾರಿಗಳು ಬೀಜಿಂಗ್ ಒಲಿಂಪಿಕ್ಸ್ ಅನ್ನು ಬಹಿಷ್ಕರಿಸುವುದಾಗಿ ಯುನೈಟೆಡ್ ಸ್ಟೇಟ್ಸ್ ಸೋಮವಾರ ಹೇಳಿತ್ತು.
ತನ್ನ ನಿರ್ಧಾರಕ್ಕೆ ಯುಎಸ್ ಬೆಲೆ ತೆರಬೇಕಾತ್ತದೆ ಎಂದು ಚೀನಾ ಹೇಳಿದೆ. ಅಲ್ಲದೇ ಪ್ರತಿಕ್ರಿಯೆಯಾಗಿ ಪ್ರತಿಕ್ರಮಗಳ ಎಚ್ಚರಿಕೆ ನೀಡಿದೆ. ಇಂತಹ ಬೆದರಿಕೆಯ ಹೊರತಾಗಿಯೂ, ಆಸ್ಟ್ರೇಲಿಯನ್ ಸರ್ಕಾರಿ ಅಧಿಕಾರಿಗಳು ಕ್ರೀಡಾಕೂಟಗಳಿಗೆ ಚೀನಾಕ್ಕೆ ಹೋಗುವುದಿಲ್ಲ ಎಂದು ಮಾರಿಸನ್ ಹೇಳಿದ್ದಾರೆ.
ಫೆಬ್ರವರಿ 2022 ರಲ್ಲಿ ಪ್ರಾರಂಭವಾಗುವ ಚಳಿಗಾಲದ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸುವ ನಿರೀಕ್ಷೆಯಿರುವ 40 ಆಸ್ಟ್ರೇಲಿಯನ್ ಅಥ್ಲೀಟ್‌ಗಳ ಮೇಲೆ ರಾಜತಾಂತ್ರಿಕ ಬಹಿಷ್ಕಾರ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಆಸ್ಟ್ರೇಲಿಯನ್ ಒಲಿಂಪಿಕ್ ಸಮಿತಿ ಹೇಳಿದೆ.