alex Certify ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಭವಿಷ್ಯದ ಪೀಳಿಗೆಗೆ ತರಬೇತಿ ನೀಡಲು ಬಯಸಿದ ಅನುರಾಗ್ ಠಾಕೂರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಭವಿಷ್ಯದ ಪೀಳಿಗೆಗೆ ತರಬೇತಿ ನೀಡಲು ಬಯಸಿದ ಅನುರಾಗ್ ಠಾಕೂರ್

ನವದೆಹಲಿ: ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಆಕ್ರೋಶದ ನಂತರ ಅವರು ಭವಿಷ್ಯದ ಪೀಳಿಗೆಗೆ ತರಬೇತಿ ನೀಡಲು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಆಶಿಸಿದ್ದಾರೆ.

ಬ್ರಿಜ್ ಭೂಷಣ್ ಶರಣ್ ಸಿಂಗ್ ನಿಷ್ಠಾವಂತ ಆಪ್ತ ಸಂಜಯ್ ಸಿಂಗ್ ಅವರನ್ನು ಭಾರತದ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್‌ಐ) ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದನ್ನು ವಿರೋಧಿಸಿ ಕುಸ್ತಿಪಟು ಬಜರಂಗ್ ಪೂನಿಯಾ ಅವರು ಪದ್ಮಶ್ರೀಯನ್ನು ಹಿಂದಿರುಗಿಸಿದ ವಿವಾದದಲ್ಲಿ ಭಾಗಿಯಾಗಲು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಶನಿವಾರ ನಿರಾಕರಿಸಿದ್ದಾರೆ.

ಈ ವಿಚಾರವಾಗಿ ‘ನಾನು ಈಗಾಗಲೇ ಸಾಕಷ್ಟು ಮಾತನಾಡಿದ್ದೇನೆ. ಇನ್ನು ಕಾಮೆಂಟ್‌ಗಳಿಲ್ಲ ಎಂದು ಠಾಕೂರ್ SAI ಕೇಂದ್ರದಲ್ಲಿ ಖ್ಯಾತ ಕ್ರೀಡಾಪಟುಗಳು ಮತ್ತು ಏಷ್ಯನ್ ಗೇಮ್ಸ್ ಪದಕ ವಿಜೇತರನ್ನು ಗೌರವಿಸುವ ಕಾರ್ಯಕ್ರಮದ ವೇಳೆ ಮಾತನಾಡಿದರು.

SAI ನಲ್ಲಿ ಹೊಸ ಹಾಸ್ಟೆಲ್ ಸೌಲಭ್ಯಗಳು ಮತ್ತು ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್ ಉದ್ಘಾಟಿಸಿದ ಠಾಕೂರ್, ಹಿಂದಿನ ಚಾಂಪಿಯನ್‌ಗಳು ಮುಂದೆ ಬರಲು ಮತ್ತು ಉದಯೋನ್ಮುಖ ಕ್ರೀಡಾಪಟುಗಳಿಗೆ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಛಾಪು ಮೂಡಿಸಲು ಸಹಾಯ ಮಾಡಲು ಪ್ರೇರೇಪಿಸಿದ್ದಾರೆ.

ನಾವು ಹಾಕಿ, ಅಥ್ಲೆಟಿಕ್ಸ್ ಮತ್ತು ಇತರ ಈವೆಂಟ್‌ಗಳಲ್ಲಿ ಸಾಕಷ್ಟು ಯಶಸ್ಸನ್ನು ಕಂಡಿದ್ದೇವೆ. ಈಗ, ಚಾಂಪಿಯನ್‌ಗಳು ಮುಂಬರುವ ಅಥ್ಲೀಟ್‌ಗಳಿಗೆ ಜ್ಞಾನ ಮತ್ತು ಅನುಭವವನ್ನು ಧಾರೆ ಎರೆಯುವುದನ್ನು ಖಚಿತಪಡಿಸಿಕೊಳ್ಳಬೇಕು. ಇದರಿಂದ ನಾವು ಭವಿಷ್ಯದಲ್ಲಿ ಈ ಪ್ರಯತ್ನವನ್ನು ಉತ್ತಮಗೊಳಿಸಬಹುದು ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...