
ಸೀರೆಯುಟ್ಟುಕೊಂಡು, ಮುಖಕ್ಕೊಂದು ಮಾಸ್ಕ್ ಹಾಕಿಕೊಂಡು ಬೌಲಿಂಗ್ ಕ್ರೀಡೆಯನ್ನು ಎಂಜಾಯ್ ಮಾಡುತ್ತಿರುವ ತನ್ನ ಅಜ್ಜಿಯ ವಿಡಿಯೋವನ್ನು ಸುದರ್ಶನ್ ಕೃಷ್ಣಮೂರ್ತಿ ಹೆಸರಿನ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಮಕ್ಕಳಂತೆ ಭಾರೀ ಉತ್ಸಾಹದಲ್ಲಿ ಬೌಲಿಂಗ್ ಮಾಡುತ್ತಿರುವ ಈ ಹಿರಿಯ ಜೀವವನ್ನು ಕಂಡಾಗ, ಖುಷಿಯಿಂದ ಇರಲು ವಯಸ್ಸು ಯಾವ ಕಾರಣಕ್ಕೂ ಅಡ್ಡಿಯಲ್ಲ ಎಂಬ ಮಾತುಗಳು ಪದೇ ಪದೇ ಸಾಬೀತಾಗುವಂತೆ ಇದೆ.
ʼಕೊರೊನಾʼ ಕಾಲದಲ್ಲಿ ಹಣದ ವಹಿವಾಟು ಕುರಿತು ಕುತೂಹಲಕಾರಿ ಮಾಹಿತಿ ಬಹಿರಂಗ
ಚೆಂಡನ್ನು ಟ್ರ‍್ಯಾಕ್‌ನಲ್ಲಿ ತಳ್ಳಿದ ಕೂಡಲೇ ತಮ್ಮ ಮೂಗನ್ನು ಕವರ್ ಮಾಡಿರುವ ಮಾಸ್ಕ್ ಸರಿಯಾಗಿ ಕುಳಿತಿದೆ ಎಂದು ಖಾತ್ರಿ ಮಾಡಿಕೊಳ್ಳುತ್ತಿರುವ ಈ ಅಜ್ಜಿಯ ವಿಡಿಯೋ ನಮ್ಮೆಲ್ಲರಿಗೂ ಕೋವಿಡ್‌ನಿಂದ ರಕ್ಷಿಸಿಕೊಳ್ಳುವ ಕುರಿತಂತೆ ಇನ್ನಷ್ಟು ಅರಿವು ಮೂಡಿಸುತ್ತಿದೆ.