alex Certify ಆಫ್ರಿಕಾದ ಅತ್ಯಂತ ಎತ್ತರದ ಪರ್ವತವೇರಿದ ಹೈದರಾಬಾದ್‌ನ 7ರ ಪೋರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಫ್ರಿಕಾದ ಅತ್ಯಂತ ಎತ್ತರದ ಪರ್ವತವೇರಿದ ಹೈದರಾಬಾದ್‌ನ 7ರ ಪೋರ

ಆಫ್ರಿಕಾದ ಅತ್ಯಂತ ಎತ್ತರದ ಪರ್ವತ ಮೌಂಟ್‌ ಕಿಲಿಮಾಂಜಾರೋವನ್ನು ಏರಿದ ಹೈದರಾಬಾದ್‌ನ 7 ವರ್ಷದ ಬಾಲಕ ಹೊಸ ದಾಖಲೆ ನಿರ್ಮಿಸಿದ್ದಾನೆ.

19,341 ಅಡಿ ಎತ್ತರದಲ್ಲಿರುವ ಪರ್ವತದ ತುದಿಯನ್ನೇರಿದ ವಿರಾಟ್ ಚಂದ್ರ, ಮಾರ್ಚ್ 6ರಂದು ಈ ಅಪರೂಪದ ಸಾಧನೆಯೊಂದನ್ನು ಮಾಡಿದ್ದಾನೆ. ತನ್ನ ಸಹೋದರರಿಂದ ಸ್ಪೂರ್ತಿಯುತ ಕಥೆಗಳನ್ನು ಕೇಳಿ ಬೆಳೆದ ಈ ಹುಡುಗ ಅಸಾಧಾರಣ ಸಾಧನೆಯೊಂದನ್ನು ಮಾಡಿದ್ದಾನೆ.

“ಪರ್ವತ ಏರುವ ಅನುಭವಗಳ ಬಗ್ಗೆ ನನ್ನ ಸಹೋದರರನ್ನು ಕೇಳಿ ತಿಳಿದೆ. ಆ ಸಂದರ್ಭದಲ್ಲಿ ನಾನೂ ಸಹ ಅವರಂತೆ ಏರಬೇಕೆಂದು ಆಸೆ ಇಟ್ಟುಕೊಂಡಿದ್ದೆ. ನನ್ನ ಆಸಕ್ತಿ ಬಗ್ಗೆ ತಂದೆ-ತಾಯಂದಿರ ಜೊತೆ ಮಾತನಾಡಿದ ಬಳಿಕ ಅವರು ಭರತ್‌ ಸರ್‌ ಜೊತೆ ಮಾತನಾಡಿದರು. ನನ್ನ ಕೋಚ್‌ ಆದ ಭರತ್‌ ಸರ್‌ ನನಗೆ ತರಬೇತಿ ಕೊಟ್ಟರು” ಎಂದಿದ್ದಾನೆ ವಿರಾಟ್.

“ವಿರಾಟ್‌ನಲ್ಲಿ ಆ ಅದಮ್ಯ ಉತ್ಸಾಹವಿತ್ತು. ಆತನಿಗೆ ತರಬೇತಿ ಕೊಡಲು ಬಹಳ ಉತ್ಸುಕನಾಗಿದ್ದೆ. ಮಿಕ್ಕವರಂತೆ ಆತ ತರಬೇತಿಯನ್ನುಅರ್ಧದಲ್ಲೇ ಬಿಟ್ಟು ಓಡಿಹೋಗಲಿಲ್ಲ. ತರಬೇತಿಯನ್ನು ಗಂಭೀರವಾಗಿ ತೆಗೆದುಕೊಂಡ ವಿರಾಟ್, ಆ ವೇಳೆ ಎಲ್ಲಾ ಟಾಸ್ಕ್‌ಗಳನ್ನೂ ಬದ್ಧತೆಯಿಂದ ಪೂರೈಸಿದ್ದಾನೆ. ಮಾರ್ಚ್‌ 5ರಂದು ಆರಂಭಗೊಂಡ ಆತನ ಪಯಣದ ವೇಳೆ ಅಗತ್ಯವಿದ್ದ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನೂ ತೆಗೆದುಕೊಂಡಿದ್ದೆವು” ಎನ್ನುತ್ತಾರೆ ಕೋಚ್‌ ಭರತ್‌.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...