ಗೋಲ್ಡ್ ಕೋಸ್ಟ್: ಆಸ್ಟ್ರೇಲಿಯಾ ಕ್ಲಬ್ ಕ್ರಿಕೆಟ್ ನ ಮೂರನೇ ಡಿವಿಷನ್ ಕ್ಲಬ್ ನ ಗೋಲ್ಡ್ ಕೋಸ್ಟ್ ಪ್ರೀಮಿಯರ್ ಲೀಗ್ ನಲ್ಲಿ ಬೌಲರ್ ಒಬ್ಬರು ಒಂದೇ ಓವರ್ ನ ಎಲ್ಲಾ ಆರು ಎಸೆತಗಳಲ್ಲಿ ವಿಕೆಟ್ ಪಡೆದು ವಿಶೇಷ ದಾಖಲೆ ಬರೆದಿದ್ದಾರೆ.
ಮುಗೀರಬ ನೇರಂಗ್ ಮತ್ತು ಡಿಸ್ಟ್ರಿಕ್ಟ್ ಕ್ರಿಕೆಟ್ ಕಲ್ಬ್ ತಂಡದ ನಾಯಕ ಗರೆಥ್ ಮಾರ್ಗನ್ ಅವರು(16ಕ್ಕೆ 7) ಓವರ್ ನ ಎಲ್ಲಾ ಎಸೆತಗಳಲ್ಲಿ ವಿಕೆಟ್ ಪಡೆದು ವಿಶೇಷ ದಾಖಲೆ ಮಾಡಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಮುಗೀರಬ ನೇರಂಗ್ ಮತ್ತು ಡಿಸ್ಟ್ರಿಕ್ಟ್ ಕ್ರಿಕೆಟ್ ಕ್ಲಬ್ 40 ಓವರ್ ಗಳಲ್ಲಿ 178 ರನ್ ಗಳಿಸಿತು. ಗೆಲುವಿನ ಗುರಿ ಬೆನ್ನತ್ತಿದ ಸರ್ಫರ್ಸ್ ಪ್ಯಾರಾಡೈಸ್ ತಂಡ 40 ಓವರ್ ಗಳಲ್ಲಿ 174 ರಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡಿತು. ಕೊನೆಯ ಓವರ್ ನಲ್ಲಿ ಐದು ರನ್ ಅಗತ್ಯವಿದ್ದಾಗ ಬೌಲಿಂಗ್ ಮಾಡಿದ ಗರೆಥ್ ಮಾರ್ಗನ್ ಸತತ ಆರು ಎಸೆತಗಳಲ್ಲಿ ಆರು ವಿಕೆಟ್ ಕಬಳಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದಾರೆ.
ಮಾರ್ಗನ್ ಅವರು ತಮ್ಮ ಆರು ಎಸೆತಗಳಲ್ಲಿ ತಲಾ ಒಂದು ವಿಕೆಟ್ ಪಡೆದು ಸರ್ಫರ್ಸ್ ಪ್ಯಾರಡೈಸ್ ಅನ್ನು 174 ರನ್‌ಗಳಿಗೆ ಔಟ್ ಮಾಡಿದರು. ಐದು ಬ್ಯಾಟ್ಸ್ ಮನ್‌ಗಳು ಗೋಲ್ಡನ್ ಡಕ್‌ಗೆ ಔಟಾದರು. ಕೊನೆಯ ಎರಡು ಬೌಲ್ಡ್ ಆದರೆ, ಮೊದಲ ನಾಲ್ಕು ವಿಕೆಟ್ ಕ್ಯಾಚ್‌ಗೆ ಒಳಗಾದವು, ಅವರು ಈ ಮೊದಲು ಸರ್ಫರ್ಸ್ ಪ್ಯಾರಡೈಸ್ ಆರಂಭಿಕ ಆಟಗಾರ ಜೇಕ್ ಗಾರ್ಲ್ಯಾಂಡ್ ಅವರ ವಿಕೆಟ್ ಪಡೆದಿದ್ದರು.ಮೋರ್ಗನ್ ಕೂಡ ಮುಗೀರಬ ಪರ 39 ರನ್ ಗಳಿಸಿ ಅಗ್ರ ಸ್ಕೋರ್ ಮಾಡಿದ್ದರು.
ವೃತ್ತಿಪರ ಕ್ರಿಕೆಟ್‌ನ ಒಂದು ಓವರ್‌ನಲ್ಲಿ ಪಡೆದ ಅತಿ ಹೆಚ್ಚು ವಿಕೆಟ್‌ಗಳು 5. 2011 ರಲ್ಲಿ ವೆಲ್ಲಿಂಗ್ಟನ್ ವಿರುದ್ಧ ಒಟಾಗೋ ಪರ ನ್ಯೂಜಿಲೆಂಡ್‌ನ ನೀಲ್ ವ್ಯಾಗ್ನರ್, 2013 ರಲ್ಲಿ ಅಭಾನಿ ಲಿಮಿಟೆಡ್ ವಿರುದ್ಧ UCB-BCB XI ಗೆ ಬಾಂಗ್ಲಾದೇಶದ ಅಲ್-ಅಮಿನ್ ಹೊಸೈನ್ ಮತ್ತು ಭಾರತದ ಅಭಿಮನ್ಯು ಮಿಥುನ್ ಈ ಸಾಧನೆ ಮಾಡಿದ್ದಾರೆ.
2019 ರಲ್ಲಿ ಕರ್ನಾಟಕದ ಅಭಿಮನ್ಯು ಮಿಥುನ್ ಹರಿಯಾಣ ಎದುರು ಓವರ್ ಒಂದರಲ್ಲಿ ಐದು ವಿಕೆಟ್ ಉರುಳಿಸಿದ್ದರು.