ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಫಿಟ್ನೆಸ್ ವಿಷ್ಯಕ್ಕೆ ವಿಶ್ವದಾದ್ಯಂತ ಪ್ರಸಿದ್ಧವಾಗಿದೆ. ಈಗ ಬಿಸಿಸಿಐನ ಇನ್ನೊಂದು ಫಿಟ್ನೆಸ್ ಪರೀಕ್ಷೆ ಚರ್ಚೆಯಲ್ಲಿದೆ. ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ 20 ಸರಣಿಯ ಮೊದಲು, ಬಿಸಿಸಿಐ ಎರಡು ಕಿಲೋಮೀಟರ್ ಓಟದ ವಿಶೇಷ ಪರೀಕ್ಷೆಯನ್ನು ಇಟ್ಟುಕೊಂಡಿದೆ. ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಸೇರಿದಂತೆ 6 ಆಟಗಾರರು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾಗಿದ್ದಾರೆ ಎನ್ನಲಾಗ್ತಿದೆ.
ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್‌ಗಳ ಸರಣಿ ಮತ್ತು ಮುಂಬರುವ ಟಿ 20 ವಿಶ್ವಕಪ್‌ಗೆ ಮುಂಚಿತವಾಗಿ ಯೋ-ಯೋ ಪರೀಕ್ಷೆಯೊಂದಿಗೆ ಬಿಸಿಸಿಐ 2 ಕಿ.ಮೀ ಓಟದ ಹೊಸ ಪರೀಕ್ಷೆಯನ್ನು ಸಹ ನಡೆಸಲಿದೆ. ಈ ಪರೀಕ್ಷೆಯಲ್ಲಿ 2 ಕಿಲೋಮೀಟರ್ ಓಟ ನಡೆಯಲಿದ್ದು, ಬ್ಯಾಟ್ಸ್ ಮನ್‌ಗಳು, ಸ್ಪಿನ್ನರ್‌ಗಳು ಮತ್ತು ವಿಕೆಟ್‌ಕೀಪರ್‌ಗಳು 8 ನಿಮಿಷ 30 ಸೆಕೆಂಡುಗಳಲ್ಲಿ ಓಟ ಪೂರ್ಣಗೊಳ್ಳಬೇಕಾಗುತ್ತದೆ. ವೇಗದ ಬೌಲರ್‌ಗಳು ಈ ಓಟವನ್ನು 8 ನಿಮಿಷ 15 ಸೆಕೆಂಡುಗಳಲ್ಲಿ ಪೂರ್ಣಗೊಳಿಸಬೇಕಾಗುತ್ತದೆ.
ಐಪಿಎಲ್ ಹರಾಜು ಪ್ರಕ್ರಿಯೆಗೆ ಆಟಗಾರರ ಲಿಸ್ಟ್ ಔಟ್..! ಸಚಿನ್ ಪುತ್ರ ಅರ್ಜುನ್ಗೂ ಸ್ಥಾನ
ಬಿಸಿಸಿಐ ತೆಗೆದುಕೊಳ್ಳುವ ಈ ಪರೀಕ್ಷೆಯ ಮೊದಲ ಹಂತದಲ್ಲಿ ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ನಿತೀಶ್ ರಾಣಾ, ರಾಹುಲ್ ತೆವಾಟಿಯಾ, ಸಿದ್ಧಾರ್ಥ್ ಕೌಲ್ ಮತ್ತು ಜಯದೇವ್ ಉನಾದ್ಕತ್ ವಿಫಲರಾಗಿದ್ದಾರೆ ಎಂದು ಮೂಲಗಳು ಹೇಳಿವೆ. ಇದು ಫಿಟ್ನೆಸ್ ಪರೀಕ್ಷೆಯ ಹೊಸ ಮಾರ್ಗವಾಗಿದೆ. ಹಾಗಾಗಿ ಆಟಗಾರರಿಗೆ ಹೊಸ ದಿನಾಂಕದಂದು ಮತ್ತೊಂದು ಅವಕಾಶವನ್ನು ನೀಡಲಾಗುತ್ತದೆ. ಒಬ್ಬ ಆಟಗಾರ ಎರಡನೇ ಬಾರಿಗೆ ಇದರಲ್ಲಿ ವಿಫಲವಾದರೆ, ಇಂಗ್ಲೆಂಡ್ ವಿರುದ್ಧದ ಸರಣಿಯಿಂದ ಆತ ಹೊರ ಬೀಳಲಿದ್ದಾನೆ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಈ ಪರೀಕ್ಷೆ ನಡೆಯುತ್ತದೆ. ಬಿಸಿಸಿಐನ ಫಿಟ್ನೆಸ್ ಪರೀಕ್ಷಾ ನಿಯಮಗಳು ತುಂಬಾ ಕಟ್ಟುನಿಟ್ಟಾಗಿವೆ.