ಸಾಮಾನ್ಯ ವ್ಯಕ್ತಿಯೊಬ್ಬ ನೀರಿನೊಳಗೆ ಉಸಿರು ಬಿಗಿ ಹಿಡಿದು ಎಷ್ಟು ನಿಮಿಷ ಕಳೆಯಬಹುದು? ಹೆಚ್ಚೆಂದರೆ ಒಂದು ನಿಮಿಷ, ಪ್ರಯತ್ನಪಟ್ಟರೆ ಒಂದೂವರೆ ನಿಮಿಷ.
ಆದರೆ ಕ್ರೊಯೇಷಿಯಾದ 54 ವರ್ಷದ ಬುಡಿಮಿರ್ ಬುಡಾ ಓಬಾಟ್ ತನ್ನ ಸತತ ಪ್ರಯತ್ನದಿಂದ ತನ್ನದೇ ಹಿಂದಿನ ದಾಖಲೆ ಮುರಿದು ಗಮನ ಸೆಳೆದಿದ್ದಾನೆ. ಈತ 24 ನಿಮಿಷ 33 ಸೆಕೆಂಡ್ ಕಾಲ ನೀರೊಳಗೆ ಉಸಿರಾಟ ಹಿಡಿದಿಟ್ಟುಕೊಂಡಿದ್ದು ಜಗತ್ತಿಗೆ ಅಚ್ಚರಿ ಮೂಡಿಸಿದ್ದಾನೆ.
ಬಸ್ ಕಿಟಕಿಯಿಂದ ತಲೆ ಹೊರಹಾಕಿ ಜೀವವನ್ನೇ ಕಳೆದುಕೊಂಡ ಬಾಲಕಿ
ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿದ್ದಾಗ ಸಿಸಾಕ್‌ನ ಈಜುಕೊಳವೊಂದರಲ್ಲಿ ಈತ ತನ್ನ ಹೊಸ ದಾಖಲೆ ಸ್ಥಾಪಿಸಿದ. ಇದಕ್ಕೂ ಮುನ್ನ ಅವರ ಹಿಂದಿನ ದಾಖಲೆ 24 ನಿಮಿಷ 11 ಸೆಕೆಂಡುಗಳಾಗಿತ್ತು.