
ಅಹಮದಾಬಾದ್: ವೆಸ್ಟ್ಇಂಡೀಸ್ ವಿರುದ್ಧದ ಏಕದಿನ ಸರಣಿಯನ್ನು 3 -0 ಅಂತರದಿಂದ ಭಾರತ ಕ್ಲೀನ್ ಸ್ವೀಪ್ ಮಾಡಿದೆ.
ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ನಡೆದ ಮೂರನೇ ಏಕದಿನ ಪಂದ್ಯವನ್ನು ಭಾರತ 96 ರನ್ ಅಂತರದಿಂದ ಜಯಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್ ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 265 ರನ್ ಗಳಿಸಿತು.
ಭಾರತದ ಪರವಾಗಿ ರೋಹಿತ್ ಶರ್ಮ 13, ಶಿಖರ್ ಧವನ್ 10, ವಿರಾಟ್ ಕೊಹ್ಲಿ 0, ಶ್ರೇಯಸ್ ಅಯ್ಯರ್ 80, ರಿಷಬ್ ಪಂತ್ 56, ಸೂರ್ಯಕುಮಾರ ಯಾದವ್ 6, ವಾಷಿಂಗ್ಟನ್ ಸುಂದರ್ 33, ದೀಪಕ್ ಚಹರ್ 38, ಕುಲದೀಪ್ ಯಾದವ್ 5, ಮಹಮದ್ ಶಮಿ 4, ಪ್ರಸಿದ್ಧ ಕೃಷ್ಣ ಅಜೇಯ 0 ರನ್ ಗಳಿಸಿದರು. ವಿಂಡೀಸ್ ಪರವಾಗಿ ಎ. ಜೋಸೆಫ್ 2, ಜೇಸನ್ ಹೋಲ್ಡರ್ 4, ಹೇಡನ್ ವಾಲ್ಶ್ 2 ವಿಕೆಟ್ ಪಡೆದರು.
266 ರನ್ ಗುರಿ ಬೆನ್ನತ್ತಿದ್ದ ವೆಸ್ಟ್ ಇಂಡೀಸ್ ಸೋಲು ಕಂಡಿದೆ. ಬ್ರೆಂಡನ್ ಕಿಂಗ್ 16, ಡರೇನ್ ಬ್ರಾವೋ 19, ನಿಕೋಲಸ್ ಪೂರನ್ 34, ಜೇಸನ್ ಹೋಲ್ಡರ್ 6, ಅಲ್ಜಾರ್ರಿ ಜೋಸೆಫ್ 29, ಒ. ಸ್ಮಿತ್ 36, ಹೇಡನ್ ವಾಲ್ಶ್ 13, ಕೆ. ರೋಚ್ 0 ರನ್ ಗಳಿಸಿದ್ದಾರೆ.
ಭಾರತದ ಪರ ದೀಪಕ್ ಚಹರ್ 2, ಮೊಹಮ್ಮದ್ ಶಮಿ 3, ಪ್ರಸಿದ್ಧ ಕೃಷ್ಣ 3, ಕುಲದೀಪ್ ಯಾದವ್ 2 ವಿಕೆಟ್ ಪಡೆದರು.
ಸ್ಕೋರ್ ವಿವರ:
ಭಾರತ 265/10(50 ಓವರ್)
ವೆಸ್ಟ್ ಇಂಡೀಸ್ 169/10(37.1 ಓವರ್)