ರಾಜಸ್ಥಾನ ಮಾಜಿ ಲೆಗ್ ಸ್ಪಿನ್ನರ್ ಮತ್ತು ರಣಜಿ ಟ್ರೋಫಿ ವಿಜೇತ ತಂಡದ ಸದಸ್ಯ ವಿವೇಕ್ ಯಾದವ್ ಕೊರೊನಾಕ್ಕೆ ಬಲಿಯಾಗಿದ್ದಾರೆ. ಅವರಿಗೆ 36 ವರ್ಷ ವಯಸ್ಸಾಗಿತ್ತು. ಪತ್ನಿ ಹಾಗೂ ಮಗಳನ್ನು ವಿವೇಕ್ ಯಾದವ್ ಅಗಲಿದ್ದಾರೆ.
ವಿವೇಕ್ ಯಾದವ್ ಬುಧವಾರ ರಾಜಸ್ತಾನದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಯಾದವ್ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿದ್ದರು. ಕೀಮೋಥೆರಪಿ ನಡೆಯುತ್ತಿತ್ತು. ಕೀಮೋಥೆರಪಿಗೆ ಆಸ್ಪತ್ರೆಗೆ ಹೋದ ವೇಳೆ ಕೋವಿಡ್ -19 ಪಾಸಿಟಿವ್ ಎಂಬುದು ಗೊತ್ತಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಯಾದವ್ ಸಾವನ್ನಪ್ಪಿದ್ದಾರೆ.
ಭಾರತದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ಟ್ವಿಟ್ ಮಾಡಿದ್ದಾರೆ. ರಾಜಸ್ಥಾನದ ರಣಜಿ ಆಟಗಾರರು ಮತ್ತು ಆಪ್ತರಾದ ವಿವೇಕ್ ಯಾದವ್ ನಮ್ಮನ್ನಗಲಿದ್ದಾರೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಟ್ವಿಟ್ ಮಾಡಿದ್ದಾರೆ. ವಿವೇಕ್ ಯಾದವ್ 18 ಪ್ರಥಮ ದರ್ಜೆ ಪಂದ್ಯಗಳಲ್ಲಿ 57 ವಿಕೆಟ್ ಪಡೆದಿದ್ದರು. 2010-11ರಲ್ಲಿ ರಣಜಿ ಟ್ರೋಫಿ ಫೈನಲ್ ಆಡಿದ್ದರು.