alex Certify ಆಗಸ್ಟ್ 15 ರೊಳಗೆ ದೇಶಾದ್ಯಂತ 1000 ಖೇಲೋ ಇಂಡಿಯಾ ಕೇಂದ್ರ ಸ್ಥಾಪನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಗಸ್ಟ್ 15 ರೊಳಗೆ ದೇಶಾದ್ಯಂತ 1000 ಖೇಲೋ ಇಂಡಿಯಾ ಕೇಂದ್ರ ಸ್ಥಾಪನೆ

ನವದೆಹಲಿ: ಆಗಸ್ಟ್ 15 ರೊಳಗೆ ದೇಶಾದ್ಯಂತ 1000 ಖೇಲೋ ಇಂಡಿಯಾ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಹೇಳಿದ್ದಾರೆ.

ದೇಶದಾದ್ಯಂತ ಮುಂದಿನ ವರ್ಷ ಆಗಸ್ಟ್ 15 ರೊಳಗೆ ಒಂದು ಸಾವಿರ ಖೇಲೋ ಇಂಡಿಯಾ ಕೇಂದ್ರಗಳನ್ನು ತೆರೆಯಲಿದ್ದು, 733 ಕೇಂದ್ರಗಳಿಗೆ ಈಗಾಗಲೇ ಮಂಜೂರಾತಿ ನೀಡಲಾಗಿದೆ. ದೇಶದಲ್ಲಿ ಕ್ರೀಡೆಗೆ ಉತ್ತೇಜನ ನೀಡುವ ಅಗತ್ಯದ ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆಗೆ ಸಚಿವರು ಉತ್ತರಿಸಿದರು.

ಟೋಕಿಯೊ ಒಲಿಂಪಿಕ್ಸ್ ಅಥವಾ ಟೋಕಿಯೊ ಪ್ಯಾರಾಲಿಂಪಿಕ್ಸ್, ಭಾರತವು ಹಿಂದಿನದಕ್ಕೆ ಹೋಲಿಸಿದರೆ ಉತ್ತಮ ಪ್ರದರ್ಶನ ನೀಡಿದೆ. ಪ್ಯಾರಾಲಿಂಪಿಕ್ಸ್‌ ನಲ್ಲೂ ಭಾರತ ಉತ್ತಮ ಪ್ರದರ್ಶನ ನೀಡಿದೆ. ಕ್ರೀಡೆಯತ್ತ ಜನರ ಮನಸ್ಥಿತಿಯನ್ನು ಬದಲಾಯಿಸಲು ಸರ್ಕಾರ ಕೆಲಸ ಮಾಡಿದೆ. ಖೇಲೋ ಇಂಡಿಯಾ ಆಟಗಳು ತಳಮಟ್ಟದ ಆಟಗಾರರಿಗೆ ಇಡೀ ರಾಷ್ಟ್ರದ ಮುಂದೆ ತಮ್ಮ ಪ್ರತಿಭೆಯನ್ನು ತೋರಿಸಲು ವೇದಿಕೆಯನ್ನು ಒದಗಿಸಿವೆ ಎಂದು ಹೇಳಿದರು.

ಕ್ರೀಡಾ ಮೂಲಸೌಕರ್ಯವನ್ನು ಸುಧಾರಿಸಲು ಗಮನ ನೀಡಲಾಗುತ್ತಿದೆ. ಪ್ಯಾರಾ ಅಥ್ಲೀಟ್‌ಗಳ ಬಗ್ಗೆ ಸರ್ಕಾರ ಯಾವುದೇ ತಾರತಮ್ಯ ತೋರಿಲ್ಲ ಎಂದರು.

ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಕಾಂಗ್ರೆಸ್ ನ ಅಧೀರ್ ರಂಜನ್ ಚೌಧರಿ, ಇತರ ದೇಶಗಳಿಗೆ ಹೋಲಿಸಿದರೆ ಭಾರತ ಕ್ರೀಡೆಯಲ್ಲಿ ಹಿಂದುಳಿದಿದೆ. ದೇಶ ಹಿಂದುಳಿದಿರುವ ಕ್ಷೇತ್ರಗಳನ್ನು ಹೇಗೆ ಪರಿಹರಿಸಬೇಕು ಎಂಬ ಬಗ್ಗೆ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯಕ್ಕೆ ಬಜೆಟ್‌ನಲ್ಲಿ ಮೀಸಲಿಡುವ ಮೊತ್ತವನ್ನು ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.

ಭಾರತ ಕ್ರಿಕೆಟ್‌ನಲ್ಲಿ ಮಾತ್ರ ಉತ್ತಮ ಪ್ರದರ್ಶನ ನೀಡುತ್ತಿದೆ ಆದರೆ ಹಾಕಿ ಮತ್ತು ಫುಟ್‌ಬಾಲ್‌ನಂತಹ ಕ್ರೀಡೆಗಳಲ್ಲಿ ಹಿಂದೆ ಬೀಳುತ್ತಿದೆ ಎಂದು ಬಿಎಸ್‌ಪಿಯ ರಿತೇಶ್ ಪಾಂಡೆ ಗಮನಸೆಳೆದರು. ಹಣದ ಕೊರತೆ ಮತ್ತು ತರಬೇತುದಾರರ ಕೊರತೆ ಇದಕ್ಕೆ ಕೆಲವು ಕಾರಣಗಳಾಗಿವೆ ಎಂದು ಅವರು ಹೇಳಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...