ಅಫ್ಘಾನಿಸ್ತಾನದ ಲೆಗ್ ಸ್ಪಿನ್ನರ್ ರಶೀದ್ ಖಾನ್, ವಿಶ್ವ ಟಿ20ಯಲ್ಲಿ ಮೊದಲನೇ ಸ್ಥಾನದಲ್ಲಿದ್ದು, ಯಶಸ್ಸಿನ ಹಾದಿಯಲ್ಲಿ ಮುನ್ನುಗ್ಗುತ್ತಿದ್ದಾರೆ.
ಎಂಥಾ ಘಟಾನುಘಟಿ ಬ್ಯಾಟ್ಸ್ ಮನ್ ಗಳಿದ್ದರೂ ಅವರ ವಿಕೆಟ್ ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ ರಶೀದ್ ಖಾನ್.
ಅಜಾದಿ ರೇಡಿಯೋ ಸಂದರ್ಶನದಲ್ಲಿ ರಶೀದ್ ಖಾನ್, ವಿಶ್ವಕಪ್ ಗೆದ್ದ ಮೇಲೆಯೇ ನಾನು ಮದುವೆಯಾಗುವೆ ಎಂದು ಹೇಳಿದ್ದು, ಇದೀಗ ಇದೇ ವಿಷಯ ಇಟ್ಟುಕೊಂಡು ಟ್ವಿಟ್ಟರ್ ನಲ್ಲಿ ರಶೀದ್ ಖಾನ್ ಅವರಿಗೆ ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ಮದುವೆಯನ್ನೇ ಆಗದಿರುವ ಸಲುವಾಗಿ ರಶೀದ್ ಖಾನ್ ಎಂತಹ ಪ್ಲಾನ್ ಮಾಡಿದ್ದಾರೆ ನೋಡಿ ಎಂದು ಛೇಡಿಸುತ್ತಿದ್ದಾರೆ.
https://twitter.com/M_a_h_iiii/status/1282197198277492737?ref_src=twsrc%5Etfw%7Ctwcamp%5Etweetembed%7Ctwterm%5E1282197198277492737%7Ctwgr%5E&ref_url=https%3A%2F%2Fm.dailyhunt.in%2Fnews%2Findia%2Fkannada%2Fnews20first20live-epaper-firnew%2Fvishvakap20gellovaregu20maduveyaagalla20endha20rashidh20kaaleledha20fyaans-newsid-n198114300%3Fs%3Dauu%3D0x8ad0f259bd677651ss%3Dwsp