ಶನಿವಾರದಂದು ಅಬುಧಾಬಿಯಲ್ಲಿ ನಡೆದ ಐಪಿಎಲ್ ನ 8ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.
ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಜಾನಿ ಬೈರ್ ಸ್ಟೋವ್ 5 ರನ್ ಗಳಿಸಿ ಪ್ಯಾಟ್ ಕಮಿನ್ಸ್ ಬೌಲಿಂಗ್ ನಲ್ಲಿ ಔಟಾದರು. ನಂತರ ನಾಯಕ ಡೇವಿಡ್ ವಾರ್ನರ್ ಕೂಡ 36 ರನ್ ಗಳಿಸಿ ಔಟಾದರು. ಬಳಿಕ ಬಂದ ಮನೀಶ್ ಪಾಂಡೆ ಸನ್ ರೈಸರ್ಸ್ ಹೈದ್ರಾಬಾದ್ ತಂಡಕ್ಕೆ ಬೆನ್ನೆಲುಬಾಗಿ ನಿಂತರು. 38 ಎಸೆತಗಳಲ್ಲಿ 51 ರನ್ ಗಳಿಸುವ ಮೂಲಕ ಆ್ಯಂಡ್ರೆ ರಸೆಲ್ ಅವರಿಗೆ ವಿಕೆಟ್ ಒಪ್ಪಿಸಿದರು. ವೃದ್ಧಿಮಾನ್ ಸಹಾ 30 ರನ್ ಗಳಿಸಿ ಔಟಾದರು. ಸನ್ ರೈಸರ್ಸ್ ಹೈದ್ರಾಬಾದ್ 4 ವಿಕೆಟ್ ನಷ್ಟಕ್ಕೆ ತಂಡ 142 ರನ್ ಗಳ ಮೊತ್ತ ದಾಖಲಿಸಿತು.
ಗುರಿ ಬೆನ್ನತ್ತಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಆರಂಭದಲ್ಲಿ ಸುನೀಲ್ ನರೈನ್ ಶೂನ್ಯಕ್ಕೆ ಔಟಾದರು. ನಂತರ ಬಂದ ನಿತೀಶ್ ರಾಣಾ 26 ರನ್ ಗಳಿಸಿ ಔಟಾದರು. ನಾಯಕ ದಿನೇಶ್ ಕಾರ್ತಿಕ್ ಕೂಡ ಶೂನ್ಯ ರನ್ ಗೆ ರಶೀದ್ ಖಾನ್ ಅವರ ಬೌಲಿಂಗ್ ನಲ್ಲಿ ಔಟಾದರು. ಆರಂಭಿಕ ಆಟಗಾರ ಶುಭಮನ್ ಗಿಲ್ ಅಜೇಯ 70 ರನ್ ಗಳಿಸಿದರು. ಇವರ ಜೊತೆ ಇಯಾನ್ ಮಾರ್ಗನ್ 42 ರನ್ ಗಳಿಸುವ ಮೂಲಕ ಉತ್ತಮ ಜೊತೆಯಾಟ ನೀಡಿದರು. 18 ಓವರ್ ಗಳಲ್ಲಿ ಕೆಕೆಆರ್ ತಂಡ ತನ್ನ ಗುರಿ ತಲುಪಿತು. ಈ ಮೂಲಕ ಕೆಕೆಆರ್ ತಂಡ 7 ವಿಕೆಟ್ ಗಳ ಜಯ ಸಾಧಿಸಿತು.