ಇಂದು ನ್ಯೂಜಿಲ್ಯಾಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಣ ನಡೆದ ಟಿ ಟ್ವೆಂಟಿ ಸರಣಿಯ ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ನಾಯಕ ಕೈರನ್ ಪೊಲಾರ್ಡ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.
ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲ್ಯಾಂಡ್ ತಂಡ ಆರಂಭದಲ್ಲಿ ಸೈಯ್ ಫರ್ಟ್ 18ರನ್ ಗಳಿಸಿ ಒಶೇನ್ ಥಾಮಸ್ ಅವರಿಗೆ ತಮ್ಮ ವಿಕೆಟ್ ಒಪ್ಪಿಸಿದರು. ನಂತರ ಮಾರ್ಟಿನ್ ಗುಪ್ಟಿಲ್ 34 ರನ್ ಗಳಿಸಿದ್ದು, ಔಟಾದರು. ಬಳಿಕ ಕೋನ್ವೆ ಹಾಗೂ ಗ್ಲೇನ್ ಫಿಲ್ಲಿಪ್ಸ್ ಉತ್ತಮ ಜೊತೆಯಾಟವಾಡಿದ್ದು, ಗ್ಲೇನ್ ಫಿಲ್ಲಿಪ್ಸ್ ಕೇವಲ 51ಎಸೆತಗಳಲ್ಲಿ 108 ರನ್ ಗಳ ಭರ್ಜರಿ ಶತಕ ಗಳಿಸಿದರು. ಕೋನ್ವೆ ಕೂಡ 37 ಎಸೆತಗಳಲ್ಲಿ 65 ರನ್ ಕಲೆ ಹಾಕಿದರು. ಗ್ಲೇನ್ ಫಿಲಿಪ್ಸ್ ಕೊನೆ ಓವರ್ ನಲ್ಲಿ ಕೈರನ್ ಪೊಲಾರ್ಡ್ ಗೆ ತಮ್ಮ ವಿಕೆಟ್ ಒಪ್ಪಿಸಿದರು. ಒಟ್ಟಾರೆ ನ್ಯೂಜಿಲ್ಯಾಂಡ್ ತಂಡ ಕೇವಲ 3 ವಿಕೆಟ್ ನಷ್ಟಕ್ಕೆ 238 ರನ್ ಗಳ ಬೃಹತ್ ಮೊತ್ತ ದಾಖಲಿಸಿತು.
ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡ ಆರಂಭದಲ್ಲಿ ಬ್ರಾಂಡನ್ ಶೂನ್ಯಕ್ಕೆ ಔಟಾದರು. ನಂತರ ಆರಂಭಿಕ ಆಟಗಾರ ಆಂಡಿ ಫ್ಲೆಚರ್ 20ರನ್ ಗಳಿಸಿದ್ದು, ರನೌಟ್ ಆದರು. ಬಳಿಕ ಬಂದ ಮೇಯೆರ್ಸ್ 20 ರನ್ ಗಳಿಸಿ ಜೇಮ್ಸ್ ನೀಶಮ್ ಬೌಲಿಂಗ್‌ನಲ್ಲಿ ಔಟಾದರೆ ನಿಕೋಲಸ್ ಪೂರನ್ ಕೇವಲ 7 ರನ್ ಗಳಿಸಿ ಸ್ಯಾಂಟ್ನರ್ ಗೆ ತಮ್ಮ ವಿಕೆಟ್ ಒಪ್ಪಿಸಿದರು. ವೆಸ್ಟ್ ಇಂಡೀಸ್ ತಂಡ ಸತತ ವಿಕೆಟ್ ಗಳನ್ನು ಕಳೆದುಕೊಂಡು 9 ವಿಕೆಟ್ ನಷ್ಟಕ್ಕೆ 166ರನ್ ಗಳಿಸುವ ಮೂಲಕ ಗುರಿ ತಲುಪುವಲ್ಲಿ ವಿಫಲವಾಯಿತು. ಈ ಮೂಲಕ ನ್ಯೂಜಿಲ್ಯಾಂಡ್ ತಂಡ ವೆಸ್ಟ್ ಇಂಡೀಸ್ ವಿರುದ್ಧ 72ರನ್ ಗಳಿಂದ ಭರ್ಜರಿ ಜಯ ಸಾಧಿಸಿತು. ಮೂರು ಟಿಟ್ವೆಂಟಿ ಸರಣಿಯಲ್ಲಿ ನ್ಯೂಜಿಲ್ಯಾಂಡ್ ತಂಡ 2-0 ಮುನ್ನಡೆ ಸಾಧಿಸುವ ಮೂಲಕ ಸರಣಿ ಕೈವಶ ಮಾಡಿಕೊಂಡಿದೆ.