ಸುರೇಶ್ ರೈನಾ ಐಪಿಎಲ್ ತೊರೆದು ಭಾರತಕ್ಕೆ ವಾಪಸ್ ಆಗಿರುವುದು ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಶ್ರೀನಿವಾಸನ್ ಅಸಮಾಧಾನಕ್ಕೆ ಕಾರಣವಾಗಿದೆ. ಸುರೇಶ್ ರೈನಾ ಐಪಿಎಲ್ ತೊರೆದಿರುವುದು ಎಲ್ಲರಿಗೂ ಶಾಕ್ ನೀಡಿದೆ. ಆದ್ರೆ ಮಹೇಂದ್ರ ಸಿಂಗ್ ಧೋನಿ ಎಲ್ಲವನ್ನು ಸಂಭಾಳಿಸಿದ್ದಾರೆಂದು ಶ್ರೀನಿವಾಸನ್ ಹೇಳಿದ್ದಾರೆ.
ಸುರೇಶ್ ರೈನಾ ಮತ್ತೆ ಐಪಿಎಲ್ ಗೆ ಬರುವ ಸಾಧ್ಯತೆಯಿದೆ. ಇನ್ನೂ ಐಪಿಎಲ್ ಶುರುವಾಗಿಲ್ಲ. ಅವ್ರು ಏನು ಕಳೆದುಕೊಳ್ತಾರೆ ಎಂಬುದು ಅವರಿಗೆ ಗೊತ್ತು. 11 ಕೋಟಿ ಸಂಬಳ ಅವರಿಗೆ ಸಿಗುವುದಿಲ್ಲವೆಂದು ಶ್ರೀನಿವಾಸನ್ ಹೇಳಿದ್ದಾರೆ.
ಧೋನಿ ಜೊತೆ ನಾನು ಮಾತನಾಡಿದ್ದೇನೆ. ಇನ್ನೂ ಕೆಲ ಆಟಗಾರರಿಗೆ ಕೊರೊನಾ ಸೋಂಕು ಕಂಡು ಬಂದ್ರೂ ಭಯಪಡುವ ಅಗತ್ಯವಿಲ್ಲವೆಂದು ಧೋನಿ ಹೇಳಿದ್ದಾರೆ. ವಿಡಿಯೋ ಕಾಲ್ ಮೂಲಕ ಧೋನಿ ಆಟಗಾರರ ಜೊತೆ ಮಾತನಾಡಿದ್ದಾರೆಂದು ಶ್ರೀನಿವಾಸನ್ ಹೇಳಿದ್ದಾರೆ. ರೈನಾ ದುಬೈಗೆ ಬಂದಾಗಿನಿಂದ ಹೊಸ ಹೊಸ ವಿಷ್ಯಕ್ಕೆ ದೂರು ನೀಡುತ್ತಲಿದ್ದರು. ಯಶಸ್ಸು ರೈನಾ ತಲೆಗೇರಿದೆ. ಸಂತೋಷವಾಗಿಲ್ಲದ ಆಟಗಾರರು ವಾಪಸ್ ಹೋಗಬಹುದು ಎಂದು ಶ್ರೀನಿವಾಸನ್ ಹೇಳಿದ್ದಾರೆ.