
ವೈಯಕ್ತಿಕ ಕಾರಣದಿಂದಾಗಿ ಸುರೇಶ್ ರೈನಾ ಚೆನ್ನೈ ಸೂಪರ್ ಕಿಂಗ್ಸ್ ತಂಡ ಬಿಟ್ಟು ಭಾರತಕ್ಕೆ ವಾಪಸ್ ಆಗಿದ್ದಾರೆ. ಈಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಇನ್ನೊಬ್ಬ ಆಟಗಾರ ಐಪಿಎಲ್ ನಿಂದ ದೂರವಾಗುವ ಸಾಧ್ಯತೆಯಿದೆ. ಚೆನ್ನೈ, ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಕಳೆದುಕೊಳ್ಳುವ ಸಾಧ್ಯತೆಯಿದೆ. ಈವರೆಗೂ ಹರ್ಭಜನ್ ಸಿಂಗ್ ತಂಡ ಸೇರಿಲ್ಲ. ಹಾಗೆ ಈ ಬಗ್ಗೆ ಯಾವುದೇ ಸೂಚನೆಯನ್ನು ತಂಡಕ್ಕೆ ನೀಡಿಲ್ಲ.
ಮೂಲಗಳ ಪ್ರಕಾರ, ಬಜ್ಜಿಯಿಲ್ಲದೆ ಮೈದಾನಕ್ಕಿಳಿಯಲು ಚೆನ್ನೈ ತಂಡ ಸಿದ್ಧವಾಗಿದೆ ಎನ್ನಲಾಗ್ತಿದೆ. ಬಜ್ಜಿ ಇನ್ನೂ ಯಾವುದೇ ಅಧಿಕೃತ ಸಂದೇಶ ಕಳುಹಿಸಿಲ್ಲ. ಇಂದು ಅಥವಾ ನಾಳೆಯೊಳಗೆ ಅವರಿಂದ ಮಾಹಿತಿ ಬರುವ ನಿರೀಕ್ಷೆಯಿದೆ. ಅದೇನೇ ಇರಲಿ, ಬಜ್ಜಿ ಇಲ್ಲದೆ ಪಂದ್ಯಕ್ಕೆ ಸಿದ್ಧರಾಗಿ ಎಂಬ ಮಾಹಿತಿಯನ್ನು ತಂಡಕ್ಕೆ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.
ಸುರೇಶ್ ರೈನಾ ತಂಡದಿಂದ ಹೊರ ಬರ್ತಿದ್ದಂತೆ ದೊಡ್ಡ ಸುದ್ದಿಯಾಗಿತ್ತು. ತಂಡದ ಮಾಲೀಕ ಒಂದು ಹೇಳಿಕೆ ನೀಡಿದ್ರೆ ಸುರೇಶ್ ರೈನಾ ಇನ್ನೊಂದು ಹೇಳಿಕೆ ನೀಡಿದ್ದರು. ಈಗ್ಲೂ ರೈನಾ ತಂಡಕ್ಕೆ ವಾಪಸ್ ಆಗ್ತಾರಾ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಈ ಎಲ್ಲದರ ಮಧ್ಯೆ ತಂಡಕ್ಕೆ ಕೊರೊನಾ ಭಯವಿದೆ. ಪ್ರೋಟೋಕಾಲನ್ನು ಕಟ್ಟುನಿಟ್ಟಾಗಿ ಪಾಲಿಸಲಾಗ್ತಿದೆ.