ಬೆಂಗಳೂರು: ಕೊರೊನಾ ಅಟ್ಟಹಾಸಕ್ಕೆ ರಾಜ್ಯದ ಜನತೆ ತತ್ತರಿಸುತ್ತಿದ್ದಾರೆ. ದೇಶದ ಮೊದಲ ಮಹಿಳಾ ಅಂತರಾಷ್ಟ್ರೀಯ ಹಾಕಿ ಅಂಪೈರ್ ಅನುಪಮಾ ಪುಚ್ಚಿಮಂಡ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
41 ವರ್ಷದ ಅನುಪಮಾ ಕರ್ನಾಟಕ ಹಾಕಿ ಅಸೋಸಿಯೇಷನ್ ಕಾರ್ಯಕಾರಿ ಮಂಡಳಿ ಸದಸ್ಯೆ ಕೂಡ ಆಗಿದ್ದರು. ಕಳೆದ ಒಂದು ವಾರದಿಂದ ಮಹಾಮಾರಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದರು.
ಕೊರೊನಾದಿಂದ ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಅನುಪಮಾ ಇದೀಗ ಕೊನೆಯುಸಿರೆಳೆದಿದ್ದಾರೆ.