
ಭಾನುವಾರದಂದು ಪಾಕಿಸ್ತಾನದ ಆಲ್ ರೌಂಡರ್ ಶೋಯೆಬ್ ಮಲಿಕ್ ಅವರ ಕಾರಿಗೆ ಅಪಘಾತ ಸಂಭವಿಸಿದೆ. ಶೋಯೆಬ್ ಮಲಿಕ್ ಅತಿ ವೇಗವಾಗಿ ಕಾರನ್ನು ಚಲಿಸುವಾಗ ನಿಯಂತ್ರಣ ತಪ್ಪಿ ನಿಂತ ಟ್ರಕ್ ಗೆ ಗುದ್ದಿ ಈ ರೀತಿ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಶೋಯೆಬ್ ಮಲಿಕ್ ನಾನು ಸಂಪೂರ್ಣವಾಗಿ ಸರಿಯಾಗಿದ್ದೇನೆ. ನನಗೆ ಯಾವುದೇ ತೊಂದರೆಯಿಲ್ಲ. ನಿಮ್ಮೆಲ್ಲರ ಪ್ರೀತಿ ಮತ್ತು ಕಾಳಜಿಗೆ ಕೃತಜ್ಞನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.