ಇಂದು ಐಪಿಎಲ್ ನ 14ನೇ ಪಂದ್ಯ ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ಕೆ ಎಲ್ ರಾಹುಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ಹಾಗೂ ಡೇವಿಡ್ ವಾರ್ನರ್ ನಾಯಕತ್ವದ ಸನ್ ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿವೆ. 3.30 ಕ್ಕೆ ಪಂದ್ಯ ಫ್ರಾರಂಭವಾಗುತ್ತಿದ್ದು ಸನ್ ರೈಸರ್ಸ್ ಹೈದರಾಬಾದ್ ಗೆ ಗೆಲುವು ಅನಿವಾರ್ಯವಾಗಿದೆ.
ಕೆ ಎಲ್ ರಾಹುಲ್ ನಾಯಕತ್ವದ ಪಂಜಾಬ್ ಕಿಂಗ್ಸ್ 3 ಪಂದ್ಯಗಳನ್ನಾಡಿದ್ದು, 1ರಲ್ಲಿ ಜಯ ಕಂಡು 2 ಪಂದ್ಯಗಳಲ್ಲಿ ಸೋತಿದೆ. ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲನ್ನನುಭವಿಸಿದ್ದ ಪಂಜಾಬ್ ಕಿಂಗ್ಸ್ ಗೆಲುವಿನ ಲಯಕ್ಕೆ ಮರಳಲು ಸಜ್ಜಾಗಿದೆ.
ಡೇವಿಡ್ ವಾರ್ನರ್ ನಾಯಕತ್ವದ ಸನ್ ರೈಸರ್ಸ್ ಹೈದರಾಬಾದ್ ಮೂರು ಪಂದ್ಯದಳನ್ನು ಆಡಿದ್ದು ಮೂರರಲ್ಲೂ ಸೋಲು ಕಂಡಿದೆ. ಈ ಪಂದ್ಯದಲ್ಲಿ ಜಯ ಗಳಿಸುವುದು ಸನ್ ರೈಸರ್ಸ್ ಗೆ ಬಹಳ ಮುಖ್ಯವಾಗಿದ್ದು, ನ್ಯೂಜಿಲ್ಯಾಂಡ್ ನ ಅನುಭವಿ ಆಟಗಾರ ಕೇನ್ ವಿಲಿಯಮ್ಸನ್ ಇಂದು ಕಣಕ್ಕಿಳಿಯುವ ಸಾಧ್ಯತೆ ಕೂಡ ಇದೆ. ಉಭಯ ತಂಡಗಳು ಇದುವರೆಗೂ 16 ಬಾರಿ ಮುಖಾಮುಖಿಯಾಗಿದ್ದು, ಸನ್ ರೈಸರ್ಸ್ 11 ಬಾರಿ ಜಯಭೇರಿಯಾದರೆ ಪಂಜಾಬ್ ಕಿಂಗ್ಸ್ 5 ಬಾರಿ ಜಯ ಸಾಧಿಸಿದೆ.