ಕೊರೊನಾದಿಂದಾಗಿ ಎಲ್ಲವೂ ಅಯೋಮಯವಾಗಿಯೇ ಉಳಿದಿದೆ. ಇತ್ತ ಕ್ರಿಕೆಟ್‌ಗೂ ಕೊರೊನಾ ಪೆಟ್ಟು ಜೋರಾಗಿಯೇ ಬಿದ್ದಿದೆ. ಇಷ್ಟೊತ್ತಿಗಾಗಲೇ ಐಪಿಎಲ್ ನಡೆಯಬೇಕಿತ್ತು. ಆದರೆ ಅದ್ಯಾವುದೂ ನಡೆಯಲಿಲ್ಲ. ಇದೆಲ್ಲದರ ನಡುವೆ ಕ್ರಿಕೆಟ್‌ನ ಮಾಜಿ ಆಟಗಾರ ಇದೀಗ ಕೋರ್ಟ್ ಮೆಟ್ಟಿಲೇರಿದ್ದಾರೆ.
ಹೌದು, ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಐಪಿಎಲ್ ಬಿಡ್ಡಿಂಗ್ ವೇಳೆ ಗಾಯಗೊಂಡಿದ್ದ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಹರಾಜು ಪ್ರಕ್ರಿಯೆಯಿಂದ ಹೊರ ಉಳಿದಿದ್ದರು. ಇದಕ್ಕಾಗಿ ವಿಮಾ ಸಂಸ್ಥೆಯಿಂದ ಇನ್ಶುರೆನ್ಸ್ ಪಡೆಯಲು ಮುಂದಾಗಿದ್ದರು.
ಗಾಯದ ಕಾರಣ ಆಟದಿಂದ ಹಿಂದೆ ಸರಿದ ಹಿನ್ನಲೆಯಲ್ಲಿ ಫ್ರಾಂಚೈಸಿ ಅವರಿಗೆ ಯಾವುದೇ ಮೊತ್ತ ನೀಡಿರಲಿಲ್ಲ. ಆದರೆ ತಮ್ಮ ಮೇಲೆ ವಿಮೆ ಮಾಡಿಸಿದ್ದ ಸ್ಟಾರ್ಕ್ ಇದೀಗ ನ್ಯಾಯಾಲಯದ ಮೊರೆ ಹೋಗಿದ್ದಾರೆ. ವಿಮಾ ಒಪ್ಪಂದದ ಪ್ರಕಾರ ಸಂಸ್ಥೆ ಸುಮಾರು 10 ಕೋಟಿ ರೂಪಾಯಿ ಪಾವತಿಸಬೇಕು. ಆದರೆ ಆ ಮೊತ್ತ ಇನ್ನೂ ಕೂಡ ಪಾವತಿಸಿಲ್ಲ ಎಂದು ಕೋರ್ಟ್ ಮೆಟ್ಟಿಲೇರಿದ್ದಾರೆ.