alex Certify ನಿವೃತ್ತಿಯಾಗಿ 7 ವರ್ಷವಾದ್ರೂ ಕಡಿಮೆಯಾಗಿಲ್ಲ ಸಚಿನ್ ಗಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿವೃತ್ತಿಯಾಗಿ 7 ವರ್ಷವಾದ್ರೂ ಕಡಿಮೆಯಾಗಿಲ್ಲ ಸಚಿನ್ ಗಳಿಕೆ

ಭಾರತೀಯ ಕ್ರಿಕೆಟ್ ತಂಡದ ಮಾಜಿ ಬ್ಯಾಟ್ಸ್ ಮನ್ ಸಚಿನ್ ತೆಂಡೂಲ್ಕರ್ 7 ವರ್ಷಗಳ ಹಿಂದೆ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ಆದರೆ ಅವರ ಜನಪ್ರಿಯತೆ ಕಡಿಮೆಯಾಗಿಲ್ಲ. ದೊಡ್ಡ ಬ್ರಾಂಡ್‌ಗಳು ಇಂದಿಗೂ ಅವರಿಗೆ ಜಾಹೀರಾತುಗಳನ್ನು ನೀಡುತ್ತಿವೆ. ಸಚಿನ್ ತೆಂಡೂಲ್ಕರ್ ಟಿವಿ, ಸಾಮಾಜಿಕ ಮಾಧ್ಯಮ ಮತ್ತು ಜಾಹೀರಾತು ಫಲಕಗಳಲ್ಲಿ ಈಗ್ಲೂ ಮಿಂಚುತ್ತಿದ್ದಾರೆ.

ಐಪಿಎಲ್ ಹೊರತುಪಡಿಸಿಯೂ ಸಚಿನ್ ತೆಂಡೂಲ್ಕರ್ ಬ್ಯುಸಿಯಾಗಿದ್ದಾರೆ. ಸಚಿನ್ ತೆಂಡೂಲ್ಕರ್ ಕೈನಲ್ಲಿ 18 ಬ್ರಾಂಡ್‌ಗಳಿವೆ. ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್ ಪೇಟಿಎಂ ಫಸ್ಟ್ ಗೇಮ್ಸ್, ಸಚಿನ್ ಅವ್ರನ್ನು ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿದೆ. ಕಳೆದ 10 ವರ್ಷಗಳಿಂದ ಅವರು ಲಿವ್‌ಪೂರ್ ಮತ್ತು ಲುಮಿನಸ್ ನಂತಹ ಬ್ರಾಂಡ್‌ಗಳನ್ನು ಹೊಂದಿದ್ದಾರೆ. ಈ ಕಂಪನಿಗಳು ಸಚಿನ್ ಜೊತೆ ಜಾಹೀರಾತುಗಳಿಗಾಗಿ ನಿರಂತರವಾಗಿ ಒಪ್ಪಂದಗಳನ್ನು ನವೀಕರಿಸಿಕೊಂಡಿವೆ.

ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಬ್ರಾಂಡ್‌ಗಳಲ್ಲಿ ಸಚಿನ್‌ ಸೇರ್ಪಡೆಗೊಳ್ಳುವ ನಿರೀಕ್ಷೆಯಿದೆ. 2016 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ ಮೂರು ವರ್ಷಗಳ ನಂತರ, ಸಚಿನ್ 25 ಬ್ರಾಂಡ್‌ಗಳನ್ನು ಹೊಂದಿದ್ದರು. ಕಳೆದ 3 ವರ್ಷಗಳಲ್ಲಿ ಅವರು ಸುಮಾರು 17 ಬ್ರಾಂಡ್‌ಗಳನ್ನು ಹೊಂದಿದ್ದಾರೆ.

ಸಚಿನ್‌ಗೆ ಹೋಲಿಸಿದರೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮುಂದಿದ್ದಾರೆ. 2019 ರಲ್ಲಿ ಡಫ್ & ಫೆಲ್ಪ್ಸ್ ನ ಪ್ರಸಿದ್ಧ ಬ್ರಾಂಡ್ ಮೌಲ್ಯಮಾಪನ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. 2019 ರಲ್ಲಿ ವಿರಾಟ್ ಒಟ್ಟು ಬ್ರಾಂಡ್ ಮೌಲ್ಯ 1,771 ಕೋಟಿ ರೂಪಾಯಿ. ಈ ಪಟ್ಟಿಯಲ್ಲಿ ಧೋನಿ 9ನೇ ಸ್ಥಾನದಲ್ಲಿದ್ದಾರೆ. ಅವರ ಬ್ರಾಂಡ್ ಮೌಲ್ಯ ಸುಮಾರು 307 ಕೋಟಿ ರೂಪಾಯಿ. ಧೋನಿ 33 ಬ್ರಾಂಡ್‌ಗಳನ್ನು ಹೊಂದಿದ್ದರೆ, ಕೊಹ್ಲಿ 25 ಬ್ರಾಂಡ್‌ಗಳನ್ನು ಹೊಂದಿದ್ದಾರೆ.

2019 ರಲ್ಲಿ ಸಚಿನ್ ಬ್ರಾಂಡ್ ಮೌಲ್ಯ ಶೇಕಡಾ 15.8 ರ ದರದಲ್ಲಿ ಸುಮಾರು 185 ಕೋಟಿಯಾಗಿತ್ತು. ಡಫ್ & ಫೆಲ್ಪ್ಸ್ 2019 ರ ಪಟ್ಟಿಯಲ್ಲಿ ಸಚಿನ್  ಮಾತ್ರ ನಿವೃತ್ತ ಸೆಲೆಬ್ರಿಟಿಯಾಗಿದ್ದರು. ಈ ವರ್ಷ ಐಪಿಎಲ್‌ನ ಮೊದಲ 16 ಪಂದ್ಯಗಳಲ್ಲಿ ಸಚಿನ್ 20 ಕ್ರೀಡಾ ಸೆಲೆಬ್ರಿಟಿ ಪಟ್ಟಿಯಲ್ಲಿ 11 ನೇ ಸ್ಥಾನದಲ್ಲಿದ್ದಾರೆ.

ಸಚಿನ್ ಮೈದಾನಕ್ಕಿಳಿಯುತ್ತಿದ್ದ ಸಂದರ್ಭದಲ್ಲಿ ಆಹಾರ, ತಂಪು ಪಾನೀಯ ಸೇರಿದಂತೆ ಅನೇಕ ಬ್ರಾಂಡ್ ನಲ್ಲಿ ಕಾಣಿಸಿಕೊಂಡಿದ್ದರು. ನಿವೃತ್ತಿ ನಂತ್ರ ಅವರಿಗೆ ಹೊಂದಿಕೆಯಾಗುವ ಜಾಹೀರಾತು ಆಯ್ಕೆ ಮಾಡಿಕೊಂಡಿದ್ದಾರೆ. ಈಗ ಬ್ಯಾಂಕ್, ಜಿಲಿಟ್, ಬಿಎಂಡಬ್ಲ್ಯು ಮತ್ತು ಯುನಿಸೆಫ್‌ನಂತಹ ಬ್ರ್ಯಾಂಡ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕ್ರೀಡಾ ನಿರ್ವಹಣಾ ಕಂಪನಿ ಎಸ್‌ಆರ್‌ಟಿಎಸ್‌ಎಂನ್ನು 2016 ರಲ್ಲಿ ತಮ್ಮ ಪತ್ನಿ ಜೊತೆ ಶುರು ಮಾಡಿದ್ದಾರೆ. ನಿವೃತ್ತಿಯ ನಂತರ ಸಚಿನ್ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿದ್ದಾರೆ. ಫೇಸ್‌ಬುಕ್‌ನಲ್ಲಿ 28 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಟ್ವಿಟರ್‌ನಲ್ಲಿ 3.43 ಕೋಟಿ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ 2.71 ಕೋಟಿ ಫಾಲೋವರ್ಸ್‌ ಇದ್ದಾರೆ. ಪೇಟಿಎಂನಂತಹ ಬ್ರಾಂಡ್ ಗಳು ಅವ್ರನ್ನು ಆಹ್ವಾನಿಸಿವೆ.

ಸಚಿನ್ ಸಾಗಾ ಎಂಬ ಆನ್‌ಲೈನ್ ಆಟವನ್ನು ರಚಿಸಿದ್ದಾರೆ. ಇಲ್ಲಿಯವರೆಗೆ ಸುಮಾರು 1.5 ಮಿಲಿಯನ್ ಗೇಮರ್ ಗಳು ಇದ್ರಲ್ಲಿ ಆಡ್ತಿದ್ದಾರೆ. ಮುಂಬೈ ಟಿ 20 ಲೀಗ್‌ನೊಂದಿಗೆ ಅವರು ದೀರ್ಘಕಾಲದ ಪಾಲುದಾರಿಕೆಯನ್ನು ಹೊಂದಿದ್ದಾರೆ. ಇದಲ್ಲದೆ, ಸಚಿನ್ ಮಿಡಲ್ಸೆಕ್ಸ್ ಗ್ಲೋಬಲ್ ಅಕಾಡೆಮಿಯನ್ನು ರಚಿಸಿದ್ದಾರೆ. ಅವರು 100MB ಎಂಬ ಪ್ಲಾಟ್‌ಫಾರ್ಮ್ ಸಹ ವಿನ್ಯಾಸಗೊಳಿಸಿದ್ದಾರೆ.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...