
ಈ ಬಾರಿಯ ಐಪಿಎಲ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಶಿಖರ್ ಧವನ್ 311ರನ್ ಗಳಿಸಿದ್ದು, ಆರೆಂಜ್ ಕ್ಯಾಪ್ ಪಡೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ ನಿನ್ನೆ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೆಕೆಆರ್ ನಡುವಣ ನಡೆದ ಐಪಿಎಲ್ ನ 25ನೇ ಪಂದ್ಯದಲ್ಲಿ ಶಿಖರ್ ಧವನ್ 46 ರನ್ ಗಳಿಸಿದರು. ಇದುವರೆಗೂ ಐಪಿಎಲ್ ನಲ್ಲಿ 5489ರನ್ ಗಳಿಸಿದ್ದ ಸುರೇಶ್ ರೈನಾ ಅವರನ್ನು ಹಿಂದಿಕ್ಕಿ ಶಿಖರ್ ಧವನ್ ಎರಡನೇ ಸ್ಥಾನಕ್ಕೆ ಬಂದಿದ್ದಾರೆ. ನಿನ್ನೆಯ ಪಂದ್ಯದಲ್ಲಿ ಶಿಖರ್ ಧವನ್ 46ರನ್ ಗಳಿಸುವ ಮೂಲಕ ಒಟ್ಟಾರೆ 5508 ರನ್ ಗಳಿಸಿದ್ದಾರೆ.
ಹುಟ್ಟುಹಬ್ಬದ ಸಂಭ್ರಮದಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ
ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ರನ್ ಗಳಿಸಿದವರ ಪಟ್ಟಿ ಇಂತಿದೆ.
1.ವಿರಾಟ್ ಕೊಹ್ಲಿ 6041
2.ಶಿಖರ್ ಧವನ್ 5508
3.ಸುರೇಶ್ ರೈನಾ 5489
4.ಡೇವಿಡ್ ವಾರ್ನರ್ 5447