ಭಾರತ-ಆಸ್ಟ್ರೇಲಿಯಾ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲೇ ಟೀಂ ಇಂಡಿಯಾಕ್ಕೆ ಶಾಕಿಂಗ್ ನ್ಯೂಸ್ ಸಿಕ್ಕಿದೆ. ರವೀಂದ್ರ ಜಡೇಜಾ ಮತ್ತು ಹನುಮ ವಿಹಾರಿ ನಾಲ್ಕನೇ ಟೆಸ್ಟ್ ನಿಂದ ಹೊರಬಿದ್ದ ಬೆನ್ನಲ್ಲೆ ಭಾರತೀಯ ಕ್ರಿಕೆಟ್ ತಂಡದ ಮತ್ತೊಬ್ಬ ಆಟಗಾರ ನಾಲ್ಕನೇ ಟೆಸ್ಟ್ ಪಂದ್ಯವನ್ನು ಆಡ್ತಿಲ್ಲ. ಬಿಸಿಸಿಐ ಮೂಲವೊಂದರ ಪ್ರಕಾರ, ಜಸ್ಪ್ರಿತ್ ಬುಮ್ರಾ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಹೊಟ್ಟೆ ಸ್ನಾಯು ಸಮಸ್ಯೆಯಿಂದ ಅವರು ಬಳಲುತ್ತಿದ್ದಾರೆ.
ಸಿಡ್ನಿಯಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದ ವೇಳೆ ಬುಮ್ರಾ ಈ ಸಮಸ್ಯೆಗೆ ಒಳಗಾಗಿದ್ದರು. ಬುಮ್ರಾ ಸ್ಕ್ಯಾನಿಂಗ್ ವರದಿಯಲ್ಲೂ ಸ್ನಾಯು ಸಮಸ್ಯೆಯಿರುವುದು ಪತ್ತೆಯಾಗಿದೆ. ಆಸ್ಟ್ರೇಲಿಯಾ ವಿರುದ್ಧ ಇದು ಕೊನೆ ಟೆಸ್ಟ್ ಪಂದ್ಯವಾಗಿದ್ದು, ಆಟಗಾರರನ್ನು ಅಪಾಯಕ್ಕೆ ತಳ್ಳಲು ಬಿಸಿಸಿಐ ಸಿದ್ಧವಿಲ್ಲ.
ಸಿಡ್ನಿಯಲ್ಲಿ ಫಿಲ್ಡಿಂಗ್ ಮಾಡುವ ವೇಳೆ ಸಮಸ್ಯೆ ಕಾಣಿಸಿಕೊಂಡಿತ್ತು. ನಾಲ್ಕನೇ ಟೆಸ್ಟ್ ನಿಂದ ಹೊರಗುಳಿಯಲಿದ್ದಾರೆ. ಆದ್ರೆ ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ಲಭ್ಯರಾಗುವ ಸಾಧ್ಯತೆಯಿದೆ ಎಂದು ಬಿಸಿಸಿಐ ಮೂಲಗಳು ಹೇಳಿವೆ. ಬುಮ್ರಾಗೆ ವಿರಾಮ ನೀಡಿದ್ರೆ ಟಿ. ನಾಗರಾಜನ್ ನಾಲ್ಕನೇ ಟೆಸ್ಟ್ ನಲ್ಲಿ ಸ್ಥಾನ ಪಡೆಯಲಿದ್ದಾರೆ.