
ಎಂ.ಎಸ್. ಧೋನಿ ಅವರನ್ನು ಸಾಕಷ್ಟು ಕ್ರಿಕೆಟಿಗರು ನಮ್ಮ ಗುರುಗಳು ಎಂದು ಹೇಳಿದ್ದಾರೆ. ಅದರಲ್ಲಿ ಭಾರತದ ಆಲ್ ರೌಂಡರ್ ರವೀಂದ್ರ ಜಡೇಜಾ ಕೂಡ ಒಬ್ಬರು.
ಕ್ರಿಕೆಟ್ ನಲ್ಲಿ ಧೋನಿ ಕೊಡುವ ಸಲಹೆಯನ್ನು ತುಂಬಾ ಚೆನ್ನಾಗಿ ಪಾಲಿಸಿದ್ದೇನೆ ಎನ್ನುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಎಂ.ಎಸ್. ಧೋನಿ ಅವರಿಗೆ ರವೀಂದ್ರ ಜಡೇಜಾ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.
ಹಿರಿಯ ಸಹೋದರ. ಮಾರ್ಗದರ್ಶಿ. ನಾಯಕ ಎಲ್ಲಕ್ಕಿಂತ ಹೆಚ್ಚಾಗಿ ಕ್ರಿಕೆಟ್ ನ ದಂತಕಥೆ. ನಿಮ್ಮಿಂದ ತುಂಬಾ ಕಲಿತಿದ್ದೇನೆ. ಆಟವೂ ನಿಮ್ಮಂಥವರನ್ನು ಕಳೆದುಕೊಳ್ಳುತ್ತದೆ ಎಂದು ರವೀಂದ್ರ ಜಡೇಜಾ ತಮ್ಮ ಇನ್ಸ್ಟಾಗ್ರಾಂ ಹಾಗೂ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
https://www.instagram.com/p/CD6nhBJH-E7/?igshid=1vmeljmnyes17