ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ ಧೋನಿ ನಿವೃತ್ತಿ ಬಗ್ಗೆ ಕಳೆದ ಒಂದು ವರ್ಷದಿಂದ ಚರ್ಚೆಯಾಗ್ತಿದೆ. 2019ರ ವಿಶ್ವಕಪ್ ನಂತ್ರ ಧೋನಿ ನಿವೃತ್ತಿ ಘೋಷಣೆ ಮಾಡ್ತಾರೆ ಎಂಬ ಸುದ್ದಿ ಹರಡುತ್ತಿದೆ. ಈ ಮಧ್ಯೆ ಧೋನಿ ಮ್ಯಾನೇಜರ್ ನಿವೃತ್ತಿ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ.
ಧೋನಿ ಸದ್ಯ ನಿವೃತ್ತಿ ಘೋಷಣೆ ಮಾಡುವುದಿಲ್ಲವೆಂದು ಅವರ ಮ್ಯಾನೇಜರ್ ಮಿಹಿರ್ ದಿವಾಕರ್ ಹೇಳಿದ್ದಾರೆ. ಧೋನಿ ಐಪಿಎಲ್ ಆಡಲು ಸಿದ್ಧವಾಗಿದ್ದಾರೆ. ಸ್ನೇಹಿತರಾಗಿರುವ ನಾವು ನಿವೃತ್ತಿ ಬಗ್ಗೆ ಮಾತನಾಡಿಲ್ಲ. ಆದ್ರೆ ಧೋನಿ ನೋಡಿದ್ರೆ ಸದ್ಯ ನಿವೃತ್ತಿ ಘೋಷಣೆ ಮಾಡ್ತಾರೆ ಎನ್ನಿಸುವುದಿಲ್ಲವೆಂದು ದಿವಾಕರ್ ಹೇಳಿದ್ದಾರೆ.
ಕೊರೊನಾ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಮೇಲೆ ಧೋನಿ ಮತ್ತೆ ಮೈದಾನಕ್ಕಿಳಿದು ಅಭ್ಯಾಸ ಮಾಡಲಿದ್ದಾರೆಂದು ಅವರು ಹೇಳಿದ್ದಾರೆ. ಲಾಕ್ ಡೌನ್ ಮಧ್ಯೆಯೂ ಧೋನಿ ಫಿಟ್ನೆಸ್ ಗೆ ಗಮನ ನೀಡ್ತಿದ್ದಾರೆ.