ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್. ಧೋನಿ ಸುದೀರ್ಘ ರಜೆ ನಂತ್ರ ಮತ್ತೆ ಫೀಲ್ಡಿಗೆ ಬಂದಿದ್ದಾರೆ. ಧೋನಿ ಜಿಮ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಧೋನಿ ದುಬೈನಲ್ಲಿ ಕುಟುಂಬಸ್ಥರ ಜೊತೆ ಅಮೂಲ್ಯ ಸಮಯ ಕಳೆದಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಧೋನಿ ಫೋಟೋಗಳು ವೈರಲ್ ಆಗಿದ್ದವು. ಕೆಲ ದಿನಗಳ ಹಿಂದೆ ಧೋನಿ ತೋಟದಲ್ಲಿ ಕಾಣಿಸಿಕೊಂಡಿದ್ದರು. ಸ್ಟ್ರಾಬೆರಿ ತಿನ್ನುತ್ತಿದ್ದ ಧೋನಿ ಫೋಟೋ ವೈರಲ್ ಆಗಿತ್ತು. ಈಗ ಧೋನಿ ಜಿಮ್ ನಲ್ಲಿರುವ ಫೋಟೋವನ್ನು ಟೆನಿಸ್ ಪಾರ್ಟನರ್ ಸುಮಿತ್ ಬಜಾಜ್ ಹಂಚಿಕೊಂಡಿದ್ದಾರೆ. ಧೋನಿ ಕೆಲ ದಿನಗಳಿಂದ ಟೆನಿಸ್ ಆಡ್ತಿದ್ದಾರೆ.
ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ನಂತ್ರ ಧೋನಿ ಕೃಷಿಯತ್ತ ಹೆಚ್ಚು ಗಮನ ನೀಡ್ತಿದ್ದಾರೆ. ಸಾವಯವ ಕೃಷಿಗೆ ಮಹತ್ವ ನೀಡುತ್ತಿದ್ದಾರೆ. ಫಿಟ್ನೆಸ್ ಮರೆಯದ ಧೋನಿ ಟೆನಿಸ್ ಜೊತೆ ಗಾಲ್ಫ್ ನಲ್ಲಿಯೂ ಆಸಕ್ತಿ ತೋರಿದ್ದಾರೆ.