
ಕ್ಯಾಪ್ಟನ್ ಕೂಲ್ ಎಂದೇ ಹೆಸರು ಪಡೆದಿರುವ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ನಿಂದ ದೂರ ಉಳಿದಿದ್ದಾರೆ 2019ರ ವಿಶ್ವಕಪ್ ನಂತರ 1 ವರ್ಷದಿಂದ ಕ್ರಿಕೆಟ್ ಗೆ ಧೋನಿ ಎಂಟ್ರಿ ಕೊಟ್ಟಿಲ್ಲ. ಐಪಿಎಲ್ ನಲ್ಲಿ ಅವರ ಆಟ ನೋಡುವ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಕೊರೊನಾ ಮಹಾಮಾರಿಯಿಂದಾಗಿ ವ್ಯರ್ಥವಾಗಿದೆ.
ಲಾಕ್ ಡೌನ್ ನಲ್ಲಿ ಧೋನಿ ತಮ್ಮ ಪತ್ನಿ ಹಾಗು ಮಗಳು ಝೀವಾ ಜೊತೆ ಎಂಜಾಯ್ ಮಾಡುತ್ತಿದ್ದಾರೆ. ಇದೀಗ ತಮ್ಮ ಎಸ್ಟೇಟ್ನಲ್ಲಿ ಸ್ವರಾಜ್ ಟ್ರ್ಯಾಕ್ಟರ್ ಚಲಾಯಿಸುತ್ತಿರುವ ವಿಡಿಯೊ ವೈರಲ್ ಆಗಿದೆ.