ನಿನ್ನೆ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಣ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮೊರ್ಗನ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಆರಂಭದಲ್ಲಿ ಕೆಎಲ್ ರಾಹುಲ್ ಶೂನ್ಯಕ್ಕೆ ಔಟಾದರು ನಂತರ ಆರಂಭಿಕ ಆಟಗಾರ ರೋಹಿತ್ ಶರ್ಮ 15ರನ್ ಗಳಿಸಿದ್ದು ಮಾರ್ಕ್ ವುಡ್ ಗೆ ತಮ್ಮ ವಿಕೆಟ್ ಒಪ್ಪಿಸಿದರು. ಇಶಾನ್ ಕಿಶನ್ 4ರನ್ ಗೆ ಕ್ರಿಸ್ ಜೋರ್ಡನ್ ಬೌಲಿಂಗ್‌ನಲ್ಲಿ ಔಟಾದರು. ನಾಯಕ ವಿರಾಟ್ ಕೊಹ್ಲಿ ಕೊನೆ ಹಂತದವರೆಗೂ ಭಾರತ ತಂಡಕ್ಕೆ ಬೆನ್ನೆಲುಬಾಗಿ ನಿಂತರು. 46 ಎಸೆತಗಳಲ್ಲಿ 77ರನ್ ಗಳಿಸಿದರು. 4 ಸಿಕ್ಸರ್ ಗಳು ಹಾಗೂ 8 ಬೌಂಡರಿಗಳನ್ನು ಸಿಡಿಸಿದರು ಒಟ್ಟಾರೆ ಭಾರತ ತಂಡ 6 ವಿಕೆಟ್ ನಷ್ಟಕ್ಕೆ 156ರನ್ ಗಳ ಮೊತ್ತ ದಾಖಲಿಸಿತು.
ಜಸ್ಪ್ರೀತ್ ಬೂಮ್ರಾ – ಸಂಜನಾ ಗಣೇಶನ್ ವಿವಾಹದ ಉಡುಪಿನ ಬೆಲೆ ಕೇಳಿದ್ರೆ ದಂಗಾಗ್ತೀರಾ….!
ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಆರಂಭದಲ್ಲಿ ಜೇಸನ್ ರಾಯ್ 9ರನ್ ಗೆ ಔಟಾದರು. ಬಳಿಕ ಬಂದ ಡೇವಿಡ್ ಮಲಾನ್ 18 ರನ್ ಗಳಿಸಿದ್ದು, ವಾಷಿಂಗ್ಟನ್ ಸುಂದರ್ ಗೆ ತಮ್ಮ ವಿಕೆಟ್ ಒಪ್ಪಿಸಿದರು. ಜೋಸ್ ಬಟ್ಲರ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. 52 ಎಸೆತಗಳಲ್ಲಿ (83) ರನ್ ಗಳಿಸಿದ್ದು ಇವರ ಈ ಸ್ಫೋಟಕ ಇನಿಂಗ್ಸ್ ನಲ್ಲಿ 4 ಸಿಕ್ಸರ್ ಹಾಗೂ 5 ಬೌಂಡರಿಗಳಿದ್ದವು. ಜೋಸ್ ಬಟ್ಲರ್ ಅವರೊಂದಿಗೆ ಜಾನಿ ಬೈರ್ ಸ್ಟೋ ಉತ್ತಮ ಜೊತೆಯಾಟವಾಡಿದರು. 18.2 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 158ರನ್ ಗಳಿಸುವ ಮೂಲಕ ಭಾರತದ ವಿರುದ್ಧ ಭರ್ಜರಿ ಜಯ ಸಾಧಿಸಿತು. ಸರಣಿಯಲ್ಲಿ ಇಂಗ್ಲೆಂಡ್ ತಂಡ 2-1 ರಿಂದ ಮುನ್ನಡೆಯಲ್ಲಿದೆ.