ಹ್ಯಾಮಿಲ್ಟನ್ ನ ಸಿಡೋನ್ ಪಾರ್ಕ್ ನಲ್ಲಿ ನಡೆದ ಬಾಂಗ್ಲಾದೇಶ ಹಾಗೂ ನ್ಯೂಜಿಲ್ಯಾಂಡ್ ನಡುವಣ ಟಿ ಟ್ವೆಂಟಿ ಸರಣಿಯ ಮೊದಲನೇ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ನಾಯಕ ಟಿಮ್ ಸೌಥಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.
ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ಆರಂಭದಲ್ಲಿ ಫಿನ್ ಅಲೆನ್ ಶೂನ್ಯಕ್ಕೆ ಔಟಾದರು ನಂತರ ಆರಂಭಿಕ ಆಟಗಾರ ಮಾರ್ಟಿನ್ ಗುಪ್ಟಿಲ್ 35ರನ್ ಗಳಿಸಿ ನಸುಮ್ ಅಹ್ಮದ್ ಗೆ ತಮ್ಮ ವಿಕೆಟ್ ಒಪ್ಪಿಸಿದರು ಕೋನ್ವೆ ಹಾಗೂ ವಿಲ್ ಯಂಗ್ ಉತ್ತಮ ಜೊತೆಯಾಟವಾಡಿದರು ವಿಲ್ ಯಂಗ್ 30 ಎಸೆತಗಳಲ್ಲಿ 53ರನ್ ಗಳಿಸಿ ಮೆಹೆದಿ ಹಸನ್ ಬೌಲಿಂಗ್ ನಲ್ಲಿ ಔಟಾದರೆ ಕೋನ್ವೆ 52 ಎಸೆತಗಳಲ್ಲಿ 92ರನ್ ಗಳಿಸಿದ್ದು ಅಜೇಯರಾಗಿ ಉಳಿದರು ಒಟ್ಟಾರೆ ನ್ಯೂಜಿಲೆಂಡ್ ತಂಡ 3 ವಿಕೆಟ್ ನಷ್ಟಕ್ಕೆ 210ರನ್ ಗಳ ಮೊತ್ತ ದಾಖಲಿಸಿತು.
ಇಂದೂ ಹರಿಯಲಿದೆ ರನ್ ಹೊಳೆ: ಸರಣಿ ಗೆಲುವಿಗೆ ಕಾತರ, ಭಾರತ-ಇಂಗ್ಲೆಂಡ್ ನಡುವೆ ಹೈವೋಲ್ಟೇಜ್ ಮ್ಯಾಚ್
ಗುರಿ ಬೆನ್ನತ್ತಿದ ಬಾಂಗ್ಲಾದೇಶ ತಂಡ ಆರಂಭದಲ್ಲಿ ಲಿಟನ್ ದಾಸ್ 4ರನ್ ಗಳಿಸಿ ಔಟಾದರೆ ಮೊಹಮ್ಮದ್ ನೈಮ್ 27ರನ್ ಗಳಿಸಿದ್ದು ಲಾಕಿ ಫರ್ಗ್ಯುಸನ್ ಗೆ ತಮ್ಮ ವಿಕೆಟ್ ಒಪ್ಪಿಸಿದರು ಅಫಿಫ್ ಹೊಸೈನ್ ಹೊರತುಪಡಿಸಿ ಯಾವ ಬ್ಯಾಟ್ಸ್ ಮನ್ ಗಳಿಂದಲೂ ಉತ್ತಮ ಪ್ರದರ್ಶನ ದೊರೆಯಲಿಲ್ಲ ಅಫಿಫ್ ಹೊಸೈನ್ 45ರನ್ ಗಳಿಸಿ ಲಾಕಿ ಫರ್ಗ್ಯುಸನ್ ಬೌಲಿಂಗ್‌ನಲ್ಲಿ ಔಟಾದರು ಬಾಂಗ್ಲಾದೇಶ ತಂಡ ತನ್ನ ಸತತ ವಿಕೆಟ್ ಗಳನ್ನು ಕಳೆದುಕೊಂಡು 8 ವಿಕೆಟ್ ನಷ್ಟಕ್ಕೆ 144ರನ್ ಗಳಿಸಿತು ಈ ಮೂಲಕ ನ್ಯೂಜಿಲೆಂಡ್ ತಂಡ ಬಾಂಗ್ಲಾದೇಶದ ವಿರುದ್ಧ 66ರನ್ ಗಳ ಭರ್ಜರಿ ಜಯ ಸಾಧಿಸಿದೆ 3ಟಿ ಟ್ವೆಂಟಿ ಸರಣಿಯಲ್ಲಿ 1-0 ಯಿಂದ ಮುನ್ನಡೆಯಲ್ಲಿದೆ