ಕೇಪ್ ಟೌನ್ ನಲ್ಲಿ ನಡೆದ ಟಿ ಟ್ವೆಂಟಿ ಸರಣಿಯ ಮೂರನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕ ಕ್ವಿಂಟನ್ ಡಿ ಕಾಕ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.
ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡದಲ್ಲಿ ಆರಂಭಿಕ ಆಟಗಾರ ನಾಯಕ ಕ್ವಿಂಟನ್ ಡಿ ಕಾಕ್ 17ರನ್ ಗಳಿಸಿ ಕ್ರಿಸ್ ಜೋರ್ದನ್ ಅವರಿಗೆ ತಮ್ಮ ವಿಕೆಟ್ ಒಪ್ಪಿಸಿದರು. ನಂತರ ಬವುಮಾ 32 ರನ್ ಗಳಿಸಿದ್ದು, ಬೆನ್ ಸ್ಟೋಕ್ಸ್ ಬೌಲಿಂಗ್‌ನಲ್ಲಿ ಔಟಾದರು.
ಹೆಂಡ್ರಿಕ್ಸ್ ಕೂಡ ಕೇವಲ 13 ರನ್ ಗಳಿಸಿ ಬೆನ್ ಸ್ಟೋಕ್ಸ್ ಗೆ ತಮ್ಮ ವಿಕೆಟ್ ಒಪ್ಪಿಸಿದರು. ನಂತರ ಪಾಫ್ ಡುಪ್ಲೆಸಿಸ್ 37 ಎಸೆತಗಳಲ್ಲಿ (52) ಹಾಗೂ ವನ್ ಡೆರ್ ಡುಸೆನ್ 32 ಎಸೆತಗಳಲ್ಲಿ (74) ಇವರು ಜೊತೆಯಾಟದಿಂದ ದಕ್ಷಿಣ ಆಫ್ರಿಕ ತಂಡ ಒಟ್ಟಾರೆ 3 ವಿಕೆಟ್ ನಷ್ಟಕ್ಕೆ 191 ರನ್ ಕಲೆ ಹಾಕಿತು.
ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡದಲ್ಲಿ ಆರಂಭಿಕ ಆಟಗಾರ ಜೇಸನ್ ರಾಯ್ 16ರನ್ ಗಳಿಸಿ ನೋರ್ಟ್ಜೆ ಅವರಿಗೆ ತಮ್ಮ ವಿಕೆಟ್ ಒಪ್ಪಿಸಿದರು. ನಂತರ ಜೋಸ್ ಬಟ್ಲರ್ 46 ಎಸೆತಗಳಲ್ಲಿ (67) ಹಾಗೂ ಡೇವಿಡ್ ಮಲಾನ್ 47 ಎಸೆತಗಳಲ್ಲಿ (99) ಇವರು ಭರ್ಜರಿ ಜೊತೆಯಾಟದಿಂದ ಇಂಗ್ಲೆಂಡ್ ತಂಡ ಕೇವಲ 1ವಿಕೆಟ್ 192 ರನ್ ಗಳಿಸುವ ಮೂಲಕ 9 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು. ಇಂಗ್ಲೆಂಡ್ ತಂಡ 3ಟಿ ಟ್ವೆಂಟಿ ಸರಣಿಯಲ್ಲಿ 3-0 ಮುನ್ನಡೆ ಸಾಧಿಸುವ ಮೂಲಕ ಕ್ಲೀನ್ ಸ್ವೀಪ್ ಮಾಡಿದೆ.