ಪ್ರೇಕ್ಷಕರಿಗೆ ಮನರಂಜನೆ ನೀಡಿದ ಈ ಬಾರಿಯ ಐಪಿಎಲ್ ನಲ್ಲಿ ಇನ್ನೇನು ಎರಡು ಪಂದ್ಯಗಳು ಮಾತ್ರ ಬಾಕಿ ಇವೆ.
ಈ ಬಾರಿಯ ಐಪಿಎಲ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರಲ್ಲಿ ಜಸ್ ಪ್ರೀತ್ ಬುಮ್ರಾ 27 ವಿಕೆಟ್ ಪಡೆದಿದ್ದು ಮೊದಲನೇ ಸ್ಥಾನದಲ್ಲಿದ್ದಾರೆ.
ನಂತರ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕಗಿಸೋ ರಬಾಡ 25 ವಿಕೆಟ್ ಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.
ಇಂದು ಕ್ವಾಲಿಫೈಯರ್ 2 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ – ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿದ್ದು, ಇಂದು ಡೆಲ್ಲಿ ಕ್ಯಾಪಿಟಲ್ಸ್ ಜಯಗಳಿಸಿದರೆ ಫೈನಲ್ ಪ್ರವೇಶಿಸುವ ಮೂಲಕ ಮುಂಬೈ ಇಂಡಿಯನ್ಸ್ ಗೆ ಎದುರಾಳಿಯಾಗಬಹುದು.
ಇನ್ನೊಂದು ಪಂದ್ಯದ ಅವಕಾಶ ಸಿಗುವ ಕಾರಣ ಕಗೀಸೊ ರಬಾಡ ಜಸ್ ಪ್ರೀತ್ ಬೂಮ್ರಾ ಅವರನ್ನು ಕೆಳಗಿಳಿಸಿ ಪರ್ಪಲ್ ಕ್ಯಾಪ್ ಪಡೆಯುತ್ತಾರಾ ನೋಡಬೇಕಾಗಿದೆ.