ಮಂಗಳವಾರ ನಡೆದ ಐಪಿಎಲ್ ನ ನಾಲ್ಕನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಕ್ಯಾಪ್ಟನ್ ಕೂಲ್ ಎಂ.ಎಸ್. ಧೋನಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.
ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಆರಂಭದಲ್ಲಿ ಜೈಸ್ವನ್ 6 ರನ್ ಗೆ ಔಟಾದರು. ನಂತರ ನಾಯಕ ಸ್ಟೀವನ್ ಸ್ಮಿತ್ ಹಾಗೂ ಸಂಜು ಸ್ಯಾಮ್ಸನ್ ಅವರ ಉತ್ತಮ ಜೊತೆಯಾಟದಿಂದ ರಾಜಸ್ಥಾನ್ ರಾಯಲ್ಸ್ ತಂಡ ಚೇತರಿಕೆ ಕಂಡಿತು.
ಸಂಜು ಸಾಮ್ಸನ್ ಸ್ಫೋಟಕ ಬ್ಯಾಟಿಂಗ್ ಮಾಡಿ 32 ಎಸೆತಗಳಲ್ಲಿ (74) 9 ಸಿಕ್ಸ್ ಹಾಗೂ 1 ಫೋರ್ ಗಳನ್ನು ಸಿಡಿಸಿದ್ದು, ಲುಂಗಿ ನಿಗಿಡಿ ಅವರಿಗೆ ವಿಕೆಟ್ ಒಪ್ಪಿಸಿದರು. ನಂತರ ನಾಯಕ ಸ್ಟೀವನ್ ಸ್ಮಿತ್ ಏಕಾಂಗಿ ಹೋರಾಟ ನಡೆಸಿ 4 ಸಿಕ್ಸರ್ 4ಫೋರ್ ಮೂಲಕ 47 ಎಸೆತಗಳಲ್ಲಿ 69 ರನ್ ಗಳಿಸಿ ಕೊನೆ ಹಂತದಲ್ಲಿ ಔಟಾದರು. ಕೊನೆಯ ಓವರ್ ನಲ್ಲಿ ಬೌಲರ್ ಚೋಪ್ರಾ ಆರ್ಚರ್ 4 ಸಿಕ್ಸರ್ ಸಿಕ್ಸರ್ ಸಿಡಿಸುವ ಮೂಲಕ ಇನ್ನೂರರ ಗಡಿ ದಾಟಲು ಸಹಾಯಕರಾದರು. ರಾಜಸ್ಥಾನ್ ರಾಯಲ್ಸ್ ತಂಡ 7 ವಿಕೆಟ್ ನಷ್ಟಕ್ಕೆ 216 ರನ್ ಗಳ ಗರಿಷ್ಠ ಮೊತ್ತ ದಾಖಲಿಸಿತು.
ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆರಂಭದಲ್ಲಿ ಶೇನ್ ವಾಟ್ಸನ್ 33 ರನ್ ಗಳಿಸಿ ಔಟಾದರು. ನಂತರ ಮುರಳಿ ವಿಜಯ್ ಕೂಡ ಶ್ರೇಯಸ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು. ಪಾಪ್ ಡು ಪ್ಲೆಸಿಸ್ ಅವರ ಸ್ಫೋಟಕ ಬ್ಯಾಟಿಂಗ್ನಿಂದ ಚೆನ್ನೈ ಸೂಪರ್ ಕಿಂಗ್ಸ್ ಸ್ವಲ್ಪ ಸುಧಾರಣೆ ಕಂಡಿತು. 37 ಎಸೆತಗಳಲ್ಲಿ (72) ರನ್ ಗಳನ್ನು ಗಳಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬೆನ್ನೆಲುಬಾಗಿ ನಿಂತರು. ಕೊನೆಯ ಹಂತದಲ್ಲಿ ಎಂ.ಎಸ್. ಧೋನಿ ಹಾಗೂ ರವೀಂದ್ರ ಜಡೇಜಾ ಕ್ರೀಸ್ ನಲ್ಲಿದರೂ ಗುರಿ ತಲುಪಲು ಸಾಧ್ಯವಾಗಲಿಲ್ಲ ಈ ಮೂಲಕ ಚೆನ್ನೈ ಸೂಪರ್‌ಕಿಂಗ್ಸ್ ತಂಡ 6 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿದ್ದು, ರಾಜಸ್ಥಾನ್ ರಾಯಲ್ಸ್ ತಂಡ 16 ರನ್ ಗಳಿಂದ ಜಯ ಸಾಧಿಸಿತು.