
ಐಪಿಎಲ್ ನ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಸಾಕಷ್ಟು ಆಟಗಾರರ ಬದಲಾವಣೆ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಹೆಚ್ಚಿನ ಆಟಗಾರರನ್ನು ಕೈಬಿಡಲಿದ್ದಾರೆ ಎಂದು ಹೇಳಲಾಗಿದೆ.
ಕೇದಾರ್ ಜಾಧವ್ ಹಾಗೂ ಸ್ಪಿನ್ನರ್ ಗಳಾದ ಹರ್ಭಜನ್ ಸಿಂಗ್, ಇಮ್ರಾನ್ ತಾಹಿರ್, ಪಿಯೂಷ್ ಚಾವ್ಲಾ ಸೇರಿದಂತೆ ಸಾಕಷ್ಟು ಆಟಗಾರರನ್ನು ಚೆನ್ನೈ ಸೂಪರ್‌ಕಿಂಗ್ಸ್ ತಂಡ ತೆಗೆಯಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಈ ವರ್ಷದ ಹರಾಜಿಗೆ ಪ್ರಾಂಚೈಸಿಗಳು ಜನವರಿ 20ರೊಳಗೆ ಯಾವ ಆಟಗಾರರನ್ನು ತ್ಯಜಿಸುತ್ತಿದ್ದಾರೊ ಆ ಆಟಗಾರರ ಲಿಸ್ಟ್ ಅನ್ನು ಕೂಡಲೇ ಕೊಡಬೇಕೆಂದು ಐಪಿಎಲ್ ಆಡಳಿತ ಮಂಡಳಿ ಹೇಳಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಯಾವ ಆಟಗಾರ ತಂಡದಿಂದ ಹೊರ ಹೊರಹೋಗಲಿದ್ದಾರೆ ಹಾಗೂ ಯಾವ ಆಟಗಾರ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬುದು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.