
ಐಪಿಎಲ್ 14ನೇ ಆವೃತ್ತಿಗಾಗಿ ಫ್ರಾಂಚೈಸಿಗಳು ಸ್ಟಾರ್ ಆಟಗಾರರನ್ನು ಕೈಬಿಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ, ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ರಾಬಿನ್ ಉತ್ತಪ್ಪ ಅವರನ್ನು ಕೈಬಿಟ್ಟಿದ್ದು ಚೆನ್ನೈ ಸೂಪರ್‌ಕಿಂಗ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಕಳೆದ ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಟವಾಡಿದ್ದ ರಾಬಿನ್ ಉತ್ತಪ್ಪ ಅವರಿಂದ ಉತ್ತಮ ಪ್ರದರ್ಶನ ದೊರೆತಿರಲಿಲ್ಲ ಎಂಬ ಕಾರಣಕ್ಕೆ ರಾಜಸ್ತಾನ್ ರಾಯಲ್ಸ್ ತಂಡ ಇವರನ್ನು ಕೈ ಬಿಡಲಾಗಿದ್ದು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ರಾಬಿನ್ ಉತ್ತಪ್ಪ ಅವರನ್ನು ತಮ್ಮ ತಂಡಕ್ಕೆ ಕರೆದುಕೊಂಡಿದೆ.
ಈಗಾಗಲೇ 6 ಆಟಗಾರರನ್ನು ಕೈಬಿಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಕನ್ನಡಿಗ ರಾಬಿನ್ ಉತ್ತಪ್ಪ ಎಂಟ್ರಿ ಕೊಟ್ಟಿದ್ದಾರೆ ಈ ಕುರಿತು ಚೆನ್ನೈ ಸೂಪರ್ ಕಿಂಗ್ಸ್ ತನ್ನ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದೆ.