ಶಿವಮೊಗ್ಗ: ಶಿವಮೊಗ್ಗದ ಪೆಸಿಟ್ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೆ.ಎಸ್.ಸಿ.ಎ. ಶಿವಮೊಗ್ಗ ವಲಯದ 16 ವರ್ಷದೊಳಗಿನ ಬಾಲಕರ ಕ್ರಿಕೆಟ್ ಟೂರ್ನಿಯಲ್ಲಿ ಕ್ರಿಕೆಟ್ ಕ್ಲಬ್ ಆಫ್ ಸಾಗರ ತಂಡದ ಆಟಗಾರ ತನ್ಮಯ್ 165 ಎಸೆತಗಳಲ್ಲಿ 407 ರನ್ ಗಳಿಸಿ ನೂತನ ದಾಖಲೆ ನಿರ್ಮಿಸಿದ್ದಾರೆ.
ಅಂತರ ರಾಷ್ಟ್ರೀಯ ಮಟ್ಟದಲ್ಲಿಯೂ ಆಗದ ದಾಖಲೆ ನಿರ್ಮಿಸಿದ ತನ್ಮಯ್ 48 ಬೌಂಡರಿ, 26 ಸಿಕ್ಸರ್ ಸಹಿತ ಅಜೇಯ 407 ರನ್ ಗಳಿಸಿದ್ದಾರೆ. ಭದ್ರಾವತಿ ಎನ್‌ಟಿಸಿಸಿ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸಾಗರ ತಂಡದ ಅಗ್ರ ಕ್ರಮಾಂಕದ ಬ್ಯಾಟರ್ ತನ್ಮಯ್(407) ಹಾಗೂ ಎ. ಅಂಶು(127) ಜೊತೆಯಾಟದಲ್ಲಿ 350 ರನ್ ದಾಖಲಿಸಿದ್ದು ಹೊಸ ದಾಖಲೆಯಾಗಿದೆ.
ಇವರ ಜೊತೆಯಾಟದ ನೆರವಿನಿಂದ 50 ಓವರ್ ಗಳಲ್ಲಿ ಸಾಗರ ತಂಡ 4 ವಿಕೆಟ್ ನಷ್ಟಕ್ಕೆ 584 ರನ್ ಗಳಿಸಿತು. ಭದ್ರಾವತಿ ತಂಡ ಅಂಶು(5 ವಿಕೆಟ್) ಹಾಗೂ ಅಜಿತ್(4) ದಾಳಿಗೆ ತತ್ತರಿಸಿ 73 ರನ್ ಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು. 510 ರನ್ ಗಳ ಭರ್ಜರಿ ದಾಖಲೆಯ ಜಯವನ್ನು ಸಾಗರ ತಂಡ ತನ್ನದಾಗಿಸಿಕೊಂಡಿತು.
ದಾಖಲೆಯ ವಿವರ
ಸಾಗರ ತಂಡದ ಜಯದ ಅಂತರ -510 ರನ್
ಮೊದಲ ವಿಕೆಟ್ ಜೊತೆಯಾಟ -ತನ್ಮಯ್ ಮತ್ತು ಅಂಶು 350 ರನ್
ಅತಿಹೆಚ್ಚು ಸಿಕ್ಸರ್ -24
ಅತಿ ಹೆಚ್ಚು ಬೌಂಡರಿ -48
ವೈಯಕ್ತಿಕ ಅತಿ ಹೆಚ್ಚು ರನ್ -ತನ್ಮಯ್ ಅಜೇಯ 407