ಕೊರೋನಾ ಮಹಾಮಾರಿ ತನ್ನ ಅಟ್ಟಹಾಸ ಮುಂದುವರಿಸಿದ್ದು, ಇದೀಗ ಬಾಂಗ್ಲಾದೇಶ ಕ್ರಿಕೆಟ್ ತಂಡದ ನಾಯಕ ತಮೀಮ್ ಇಕ್ಬಾಲ್ ಅವರ ಸಹೋದರ ಮಾಜಿ ಕ್ರಿಕೆಟ್ ಆಟಗಾರ ನಫೀಸ್ ಇಕ್ಬಾಲ್ ಗೆ ಕೊರೋನಾ ಪಾಸಿಟಿವ್ ಬಂದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇತ್ತೀಚೆಗಷ್ಟೇ ಪಾಕಿಸ್ತಾನದ ಮೂವರು ಕ್ರಿಕೆಟ್ ಆಟಗಾರರಿಗೆ ಕೊರೊನಾ ಬಂದಿತ್ತು. ಇದೀಗ ಬಾಂಗ್ಲಾದೇಶದ ಮಾಜಿ ಆಟಗಾರ ನಫೀಸ್ ಇಕ್ಬಾಲ್ ಗೆ ಕೊರೊನಾ ತಗುಲಿದೆ.