ಸೋಮವಾರದಂದು ಶಾರ್ಜಾದಲ್ಲಿ ನಡೆದ ಐಪಿಎಲ್ ನ 28ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಿದ್ದು, ಆರ್.ಸಿ.ಬಿ. ತಂಡದ ನಾಯಕ ವಿರಾಟ್ ಕೋಹ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.
ಮೊದಲು ಬ್ಯಾಟಿಂಗ್ ಮಾಡಿದ ಆರ್.ಸಿ.ಬಿ. ತಂಡ ಆರಂಭದಲ್ಲಿ ದೇವದತ್ ಪಡಿಕಲ್ 32ರನ್ ಗಳಿಸಿ ಆಂಡ್ರೆ ರಸ್ಸೆಲ್ ಅವರಿಗೆ ತಮ್ಮ ವಿಕೆಟ್ ಒಪ್ಪಿಸಿದರು. ನಂತರ ಆರಂಭಿಕ ಆಟಗಾರ ಆರೊನ್ ಫಿಂಚ್ ಪ್ರಸಿದ್ಧ್ ಕೃಷ್ಣ ಬೌಲಿಂಗ್‌ನಲ್ಲಿ ಔಟಾದರು. ನಾಯಕ ವಿರಾಟ್ ಕೊಹ್ಲಿ 28 ಎಸೆತಗಳಲ್ಲಿ 33 ಹಾಗೂ ಎಬಿ ಡಿವಿಲಿಯರ್ಸ್ 33 ಎಸೆತಗಳಲ್ಲಿ 73 ಇವರ ಉತ್ತಮ ಜೊತೆಯಾಟದಿಂದ ಆರ್.ಸಿ.ಬಿ. ತಂಡ 2 ವಿಕೆಟ್ ನಷ್ಟಕ್ಕೆ 194ರನ್ ಗಳ ಮೊತ್ತ ದಾಖಲಿಸಿತು.
ಗುರಿ ಬೆನ್ನತಿದ ಕೆಕೆಆರ್ ತಂಡದಲ್ಲಿ ಆರಂಭಿಕ ಆಟಗಾರ ಟಾಮ್ ಬ್ಯಾಂಟೋನ್ 8ರನ್ ಗಳಿಸಿ ನವದೀಪ್ ಸೈನಿ ಅವರಿಗೆ ತಮ್ಮ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ನಿತೀಶ್ ರಾಣಾ 9ರನ್ ಗಳಿಸಿದ್ದು ವಾಶಿಂಗ್ಟನ್ ಸುಂದರ್ ಬೌಲಿಂಗ್‌ನಲ್ಲಿ ಔಟಾದರು. ಶುಭ್ ಮನ್ ಗಿಲ್ 34 ರನ್ ಗಳಿಸಿದ್ದು ರನ್ ಔಟ್ ಆದರು. ಬಳಿಕ ಬಂದ ನಾಯಕ ದಿನೇಶ್ ಕಾರ್ತಿಕ್ ಕೇವಲ 1ರನ್ ಗಳಿಸಿ ಚಾಹಲ್ ಬೌಲಿಂಗ್‌ನಲ್ಲಿ ಔಟಾದರು. ಸತತ ವಿಕೆಟ್ಗಳನ್ನು ಕಳೆದುಕೊಂಡು ಕೆಕೆಆರ್ ತಂಡ 9 ವಿಕೆಟ್ ನಷ್ಟಕ್ಕೆ 112ರನ್ ಗಳಿಸಿ ಗುರಿ ತಲುಪುವಲ್ಲಿ ವಿಫಲವಾಯಿತು. ಈ ಮೂಲಕ ಆರ್.ಸಿ.ಬಿ. ತಂಡ ಕೆಕೆಆರ್ ವಿರುದ್ಧ 82ರನ್ ಗಳಿಂದ ಭರ್ಜರಿ ಜಯ ಸಾಧಿಸಿತು.