ಭಾನುವಾರದಂದು ನಡೆದ ಐಪಿಎಲ್ ನ ಎರಡನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ತಂಡದ ನಾಯಕ ಕೆ.ಎಲ್. ರಾಹುಲ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.
ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ ಶಿಖರ್ ಧವನ್ ಆರಂಭದಲ್ಲಿಯೇ ಶೂನ್ಯ ರನ್ ಗಳಿಸಿ ಔಟಾದರು ನಂತರ ಪೃಥ್ವಿ ಶಾ ಕೂಡ ಕೇವಲ 5 ರನ್ ಗಳಿಸಿ ಶಮಿ ಅವರಿಗೆ ವಿಕೆಟ್ ಒಪ್ಪಿಸಿದರು. ಹೆಟ್ಮೈರ್ ಕೂಡ 7 ರನ್ ಗೆ ಔಟಾದರು.
ನಂತರ ನಾಯಕ ಶ್ರೇಯಸ್ ಅಯ್ಯರ್ (39) ಹಾಗೂ ರಿಷಬ್ ಪಂತ್ (31) ಇವರ ಜೊತೆಯಾಟದಿಂದ ಡೆಲ್ಲಿ ಕ್ಯಾಪಿಟಲ್ಸ್ ಸ್ವಲ್ಪ ಚೇತರಿಕೆ ಕಂಡಿತು. ನಂತರ ಇಬ್ಬರು ಔಟಾದರು. ಬಳಿಕ ಬ್ಯಾಟಿಂಗ್ ಗಿಳಿದ ಸ್ಟೊಯಿನಿಸ್ 21 ಎಸೆತಗಳಲ್ಲಿ (53) ರನ್ ಗಳಿಸಿದ್ದು, ಇವರ ಅಬ್ಬರದ ಬ್ಯಾಟಿಂಗ್ ನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ 8 ವಿಕೆಟ್ ನಷ್ಟಕ್ಕೆ 157 ರನ್ ಗಳ ಮೊತ್ತ ದಾಖಲಿಸಿತು.
ಗುರಿ ಬೆನ್ನತ್ತಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಆರಂಭದಲ್ಲಿ ನಾಯಕ ಕೆ.ಎಲ್. ರಾಹುಲ್ ಔಟಾಗಿದ್ದು, ಬಳಿಕವೂ ಸಾಕಷ್ಟು ವಿಕೆಟ್‍ಗಳನ್ನು ಕಳೆದುಕೊಂಡಿತು. ಮಯಾಂಕ್ ಅಗರ್ವಾಲ್ 60 ಎಸೆತಗಳಲ್ಲಿ 89 ರನ್ ಗಳಿಸಿದ್ದು, ಇದರಿಂದಾಗಿ ಸ್ವಲ್ಪ ಸುಧಾರಣೆ ಕಂಡಿತು. ಕೊನೆಯ ಹಂತದವರೆಗೂ ಮಯಾಂಕ್ ಅಗರ್ವಾಲ್ ಬೆನ್ನೆಲುಬಾಗಿ ನಿಂತಿದ್ದರು. ಕೊನೆಯ ಓವರ್ ನಲ್ಲಿ ಮಯಾಂಕ್ ಅಗರ್ವಾಲ್ ಔಟಾಗಿದ್ದು, ಪಂದ್ಯ ಡ್ರಾ ಆದ ಕಾರಣ ಸೂಪರ್ ಓವರ್ ನಡೆಸಲಾಯಿತು. ರಬಾಡ ಮಾರಕ ಬೌಲಿಂಗ್ ನಿಂದ ಕಿಂಗ್ಸ್ ಇಲೆವೆನ್ ಸೂಪರ್ ಓವರ್ ನಲ್ಲಿ ಕೇವನ್ 2ರನ್ ಗಳಿಸಿತು. ಇದರಿಂದ ಸುಲಭವಾಗಿ ಡೆಲ್ಲಿ ಕ್ಯಾಪಿಟಲ್ಸ್ ಜಯ ಸಾಧಿಸಿತು.