2020ರ ಐಪಿಎಲ್ ಗಾಗಿ ಬಿಸಿಸಿಐ ಅಂತಿಮ ಸಿದ್ಧತೆ ನಡೆಸುತ್ತಿದೆ. ಭಾನುವಾರ ನಡೆಯುವ ಆಡಳಿತ ಮಂಡಳಿ ಸಭೆಯಲ್ಲಿ, ಫ್ರ್ಯಾಂಚೈಸ್ ಮಾಲೀಕರು, ಪ್ರಾಯೋಜಕರು ಮತ್ತು ಪ್ರಸಾರಕರೊಂದಿಗೆ ಚರ್ಚೆ ನಡೆಯಲಿದೆ.
ಈ ವರ್ಷದ ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗೆ ಯುಎಇಯಲ್ಲಿ ಐಪಿಎಲ್ ಪಂದ್ಯಾವಳಿ ನಡೆಯಲಿದೆ. ಕೊರೊನಾ ಹಿನ್ನಲೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗ್ತಿದೆ. ಕನಿಷ್ಠ ಆರಂಭಿಕ ಪಂದ್ಯಗಳಲ್ಲಿ ಕ್ರೀಡಾಂಗಣದ ಒಳಗೆ ಯಾವುದೇ ಪ್ರೇಕ್ಷಕರು ಇರುವುದಿಲ್ಲ. ಕಮೆಂಟೇಟರ್ಸ್ ಸ್ಟುಡಿಯೋದಲ್ಲಿ ಪರಸ್ಪರ ಆರು ಅಡಿ ದೂರದಲ್ಲಿ ಕುಳಿತುಕೊಳ್ಳುತ್ತಾರೆ. ಡ್ರೆಸ್ಸಿಂಗ್ ಕೋಣೆಯಲ್ಲಿ 15 ಕ್ಕೂ ಹೆಚ್ಚು ಆಟಗಾರರು ಇರುವುದಿಲ್ಲ. ಪಂದ್ಯದ ನಂತರ ಪ್ರಶಸ್ತಿ ವಿತರಣೆ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುವುದು.
ಎಲ್ಲಾ ಆಟಗಾರರಿಗೆ ಎರಡು ವಾರಗಳಲ್ಲಿ ನಾಲ್ಕು ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಆಟಗಾರರು ಮಾತ್ರವಲ್ಲ ಅವರ ಪತ್ನಿ, ಗೆಳತಿ, ಫ್ರ್ಯಾಂಚೈಸಿ ಮಾಲೀಕರು ಆಡಳಿತ ಮಂಡಳಿ ಜಾರಿಗೆ ತರುವ ನಿಯಮಗಳನ್ನು ಪಾಲಿಸಬೇಕಾಗುತ್ತದೆ.