ಚೆನ್ನೈ ಸೂಪರ್‌ಕಿಂಗ್ಸ್ ತಂಡದ ನಾಯಕ ಕ್ಯಾಪ್ಟನ್ ಕೂಲ್ ಎಂ.ಎಸ್. ಧೋನಿ ನಿನ್ನೆ ಕೆಕೆಆರ್ ವಿರುದ್ಧ ನಡೆದ ಪಂದ್ಯದಲ್ಲಿ ಹೊಸ ದಾಖಲೆಯೊಂದನ್ನು ಮಾಡಿದ್ದಾರೆ.
ನಿನ್ನೆ ನಡೆದ ರೋಮಾಂಚನಕಾರಿ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಚೆನ್ನೈ ಸೂಪರ್‌ಕಿಂಗ್ಸ್ 18 ರನ್ ಗಳಿಂದ ರೋಚಕ ಜಯ ಸಾಧಿಸಿತು. ಈ ಪಂದ್ಯದಲ್ಲಿ ಎಂ.ಎಸ್. ಧೋನಿ ಮೂರು ಅಮೋಘ ಕ್ಯಾಚ್ ಗಳನ್ನು ಹಿಡಿದರು. ಈ ಮೂಲಕ ಐಪಿಎಲ್ ನಲ್ಲೇ ಇದುವರೆಗೂ 150 ಔಟ್ ಮಾಡಿರುವ ಮೊದಲ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಎಂ.ಎಸ್. ಧೋನಿ ಒಟ್ಟಾರೆ 111 ಕ್ಯಾಚ್ ಗಳು ಹಾಗೂ 39 ಸ್ಟಂಪ್ ಗಳನ್ನು ಮಾಡಿದ್ದಾರೆ. ಬೌಲರ್ ಗಳಿಗೆ ಸಲಹೆ ನೀಡುವ ಮೂಲಕ ಚೆನ್ನೈ ಸೂಪರ್‌ಕಿಂಗ್ಸ್ ತಂಡದ ಅತ್ಯುತ್ತಮ ವಿಕೆಟ್ ಕೀಪರ್ ಹಾಗೂ ನಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.