ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ನಡುವಣ ನಡೆದ ಏಕದಿನ ಸರಣಿಯ ಮೂರನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ನಾಯಕ ಟಾಮ್ ಲಾಥಮ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.
ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ಆರಂಭದಲ್ಲಿ ಹೆನ್ರಿ ನಿಕೋಲ್ಸ್ 18ರನ್ ಗಳಿಸಿ ಔಟಾದರು, ನಂತರ ಮಾರ್ಟಿನ್ ಗಪ್ಟಿಲ್ 26ರನ್ ಗಳಿಸಿ ರುಬೆಲ್ ಗೆ ತಮ್ಮ ವಿಕೆಟ್ ಒಪ್ಪಿಸಿದರು. ಕೋನ್ವೆ ಮತ್ತು ಡ್ಯಾರಿಲ್ ಮಿಚೆಲ್ ಹೊರತು ಪಡಿಸಿ ಯಾವ ಬ್ಯಾಟ್ಸ್ ಮನ್ ಗಳಿಂದಲೂ ಉತ್ತಮ ಪ್ರದರ್ಶನ ದೊರೆಯಲಿಲ್ಲ ಕೋನ್ವೆ 110 ಎಸೆತಗಳಲ್ಲಿ 126ರನ್ ಗಳಿಸಿದರೆ ಡ್ಯಾರಿಲ್ ಮಿಚೆಲ್ 100 ರನ್ ಬಾರಿಸುವ ಮೂಲಕ ಅಜೇಯರಾಗಿ ಉಳಿದರು ಒಟ್ಟಾರೆ ನ್ಯೂಜಿಲೆಂಡ್ ತಂಡ 6ವಿಕೆಟ್ ನಷ್ಟಕ್ಕೆ 318ರನ್ ಗಳ ಮೊತ್ತ ದಾಖಲಿಸಿತು.
ತಡರಾತ್ರಿ ಬೆಂಗಳೂರಲ್ಲಿ ಫೈರಿಂಗ್: ಕೊಲೆ ಆರೋಪಿ ಕಾಲಿಗೆ ಗುಂಡೇಟು
ಗುರಿ ಬೆನ್ನತ್ತಿದ ಬಾಂಗ್ಲಾದೇಶ ತಂಡ ಆರಂಭದಲ್ಲಿ ನಾಯಕ ತಮಿಮ್ ಇಕ್ಬಾಲ್ ಕೇವಲ 1 ರನ್ ಗಳಿಸಿ ಮ್ಯಾಟ್ ಹೆನ್ರಿ ಗೆ ತಮ್ಮ ವಿಕೆಟ್ ಒಪ್ಪಿಸಿದರು ಬಳಿಕ ಬಂದ ಸೌಮ್ಯ ಸರ್ಕಾರ್ ಕೂಡ 1 ರನ್ ಗಳಿಸಿ ಮ್ಯಾಟ್ ಹೆನ್ರಿ ಬೌಲಿಂಗ್ ನಲ್ಲಿ ಔಟಾದರು, ಜೇಮ್ಸ್ ನೀಶಮ್ ಹಾಗೂ ಮ್ಯಾಟ್ ಹೆನ್ರಿ ಬೌಲಿಂಗ್ ದಾಳಿಗೆ ಬಾಂಗ್ಲಾದೇಶ ತನ್ನ ಸತತ ವಿಕೆಟ್ ಗಳನ್ನು ಕಳೆದುಕೊಂಡು ಹೋಯಿತು ಮಹಮದುಲ್ಲ 76ರನ್ ಗಳಿಸುವ ಮೂಲಕ ಕೊನೆಯವರೆಗೂ ಏಕಾಂಗಿಯಾಗಿ ಹೋರಾಡಿದರು.
ಬಾಂಗ್ಲಾದೇಶ ತಂಡ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು ಕೇವಲ 154ರನ್ ಗಳಿಸುವ ಮೂಲಕ ಅಂತಿಮ ಪಂದ್ಯದಲ್ಲೂ ಸೋಲನುಭವಿಸಿದೆ. ಈ ಮೂಲಕ ನ್ಯೂಜಿಲೆಂಡ್ ತಂಡ ಬಾಂಗ್ಲಾದೇಶ ವಿರುದ್ಧ ಏಕದಿನ ಸರಣಿಯ 3ಪಂದ್ಯಗಳನ್ನು ಗೆಲ್ಲುವ ಮೂಲಕ ಕ್ಲೀನ್ ಸ್ವೀಪ್ ಮಾಡಿದೆ.