ಇಂದು ಬಾಂಗ್ಲಾದೇಶ ಹಾಗೂ ನ್ಯೂಜಿಲ್ಯಾಂಡ್ ನಡುವಣ ನಡೆದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ನ ನಾಯಕ ಟಾಮ್ ಲಾಥಮ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.
ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ ಆರಂಭದಲ್ಲಿ ಲಿಟನ್ ದಾಸ್ ಶೂನ್ಯಕ್ಕೆ ಔಟಾದರು ಬಳಿಕ ಬಂದ ಸೌಮ್ಯ ಸರ್ಕಾರ್ 32ರನ್ ಗಳಿಸಿ ಮಿಚೆಲ್ ಸ್ಯಾಂಟ್ನರ್ ಗೆ ತಮ್ಮ ವಿಕೆಟ್ ಒಪ್ಪಿಸಿದರು ನಂತರ ಆರಂಭಿಕ ಆಟಗಾರ ನಾಯಕ ತಮಿಮ್ ಇಕ್ಬಾಲ್ 78ರನ್ ಗಳಿಸಿದ್ದು ರನೌಟಾದರು ನಂತರ ಬಂದ ಮೊಹಮ್ಮದ್ ಮಿಥುನ್ ಕೊನೆಯ ಹಂತದವರೆಗೂ ಬಾಂಗ್ಲಾದೇಶ ತಂಡಕ್ಕೆ ಬೆನ್ನೆಲುಬಾಗಿ ನಿಂತರು 57 ಎಸೆತಗಳಲ್ಲಿ (73)ರನ್ ಗಳಿಸಿದರು, ಒಟ್ಟಾರೆ ಬಾಂಗ್ಲಾದೇಶ ತಂಡ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 271ರನ್ ಗಳ ಮೊತ್ತ ದಾಖಲಿಸಿತು.
ಪುಟ್ಟ ಬಾಲಕಿಯ ಪ್ರೋತ್ಸಾಹಕ್ಕೆ ಯುವರಾಜ್ ಸಿಂಗ್ ಫಿದಾ
ಗುರಿ ಬೆನ್ನತ್ತಿದ ನ್ಯೂಜಿಲ್ಯಾಂಡ್ ತಂಡದಲ್ಲಿ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ 20ರನ್ ಗಳಿಸಿ ಮುಸ್ತಫಿಜುರ್ ಗೆ ತಮ್ಮ ವಿಕೆಟ್ ಒಪ್ಪಿಸಿದರು. ನಂತರ ಎನ್ರಿ ನಿಕೋಲ್ಸ್ 13ರನ್ ಗಳಿಸಿ ಔಟಾದರೆ ವಿಲ್ ಯಂಗ್ ಕೇವಲ 1 ರನ್ ಗಳಿಸಿ ಮೆಹಿದಿ ಹಸನ್ ಬೌಲಿಂಗ್ ನಲ್ಲಿ ಬೋಲ್ಡ್ ಆದರು. ನಂತರ ಕೋನ್ವೆ ಹಾಗೂ ಟಾಮ್ ಲಾಥಮ್ ಉತ್ತಮ ಜೊತೆಯಾಟವಾಡಿದರು. ಕೋನ್ವೆ 72ರನ್ ಗಳಿಸಿದ್ದು ರನ್ ಔಟಾದರು ಟಾಮ್ ಲಾಥಮ್ ಭರ್ಜರಿ ಶತಕ ಗಳಿಸಿದರು 110ರನ್ ಗಳಿಸುವ ಮೂಲಕ ಅಜೇಯರಾಗಿ ಉಳಿದರು ನ್ಯೂಜಿಲ್ಯಾಂಡ್ ತಂಡ 5 ವಿಕೆಟ್ ನಷ್ಟಕ್ಕೆ 275ರನ್ ಗಳಿಸಿ ಜಯ ಸಾಧಿಸಿದೆ. ಈ ಮೂಲಕ ನ್ಯೂಜಿಲ್ಯಾಂಡ್ ತಂಡ 3ಏಕದಿನ ಸರಣಿಯಲ್ಲಿ 2-0 ಯಿಂದ ಸರಣಿ ಕೈವಶ ಮಾಡಿಕೊಂಡಿದೆ.